ನವದೆಹಲಿ: ಇನ್ನು ಮುಂದೆ ಗ್ರಾಹಕರು ರಾಜಕೀಯ, ಪ್ರಭಾವಿ ವ್ಯಕ್ತಿಗಳ ಸಹಾಯವಿಲ್ಲದೇ ಸುಲಭವಾಗಿ ವಿದ್ಯುತ್ ಸಂಪರ್ಕ ಪಡೆಯಬಹುದು. ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ತನ್ನು ಗ್ರಾಹಕರ ಹಕ್ಕು ಎಂದು ಪರಿಗಣಿಸಲು ಕೇಂದ್ರ ಸರ್ಕಾರ ನಿಯಮ ತರಲು ಮುಂದಾಗಿದೆ.
ಕೇಂದ್ರ ಸರ್ಕಾರ ವಿದ್ಯುತ್ (ಗ್ರಾಹಕರ ಹಕ್ಕು) ನಿಯಮಾವಳಿ-2020 ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಸಂಬಂಧ ಕರಡು ನಿಯಮಗಳನ್ನು ಸರ್ಕಾರ ರೂಪಿಸಿದ್ದು, ಸೆ.30ರೊಳಗೆ ಜನರು ಪ್ರತಿಕ್ರಿಯೆ ನೀಡಬೇಕು ಎಂದು ಕೇಳಿಕೊಂಡಿದೆ.
Advertisement
@MinOfPower in a historic pro-consumer move drafts Electricity (Rights of Consumers) Rules, 2020; invites suggestions/comments by 30th September. @RajKSinghIndia @PIB_India @airnewsalerts @DDNewslive https://t.co/yBcRnl0pap
— PIB_INDIA Power Ministry (@power_pib) September 16, 2020
Advertisement
ಒಂದು ವೇಳೆ ಇದು ಜಾರಿಯಾದರೆ ವಿದ್ಯುತ್ ಪಡೆಯುವುದು ಈ ದೇಶದಲ್ಲಿರುವ ಎಲ್ಲ ಜನರ ಹಕ್ಕಾಗಲಿದೆ. ಅರ್ಜಿ ಸಲ್ಲಿಸಿದ ನಿರ್ದಿಷ್ಟಸಮಯದೊಳಗೆ ಇಂಧನ ಇಲಾಖೆ ವಿದ್ಯುತ್ ಸಂಪರ್ಕ ನೀಡಲೇಬೇಕಾಗುತ್ತದೆ.
Advertisement
ನಿಯಮಗಳಲ್ಲಿ ಏನಿದೆ?
– ಮೆಟ್ರೋ ನಗರಗಳಲ್ಲಿ ಗ್ರಾಹಕರು ಅರ್ಜಿ ಸಲ್ಲಿಸಿದ 7 ದಿನ, ಮುನ್ಸಿಪಲ್ ಪಟ್ಟಣಗಳಲ್ಲಿ 15 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನದೊಳಗೆ ವಿದ್ಯುತ್ ಸಂಪರ್ಕ ನೀಡಬೇಕು ಅಥವಾ ಈಗಾಗಲೇ ನೀಡಿರುವ ಸಂಪರ್ಕವನ್ನು ನವೀಕರಿಸಿಕೊಡಬೇಕು.
Advertisement
– 10 ಕಿಲೋ ವ್ಯಾಟ್ ವಿದ್ಯುತ್ ಸಂರ್ಪಕ್ಕೆ ಕೇವಲ 2 ದಾಖಲೆ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಸರಳ ವ್ಯವಸ್ಥೆ ಜಾರಿಯಾಗಬೇಕು.
– ಸದ್ಯ ಇರುವ ಎಲ್‌ಪಿಜಿ ಮಾದರಿಯಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಹಣ ಜಮೆ
– 1 ಸಾವಿರ ರೂ. ವರೆಗೆಗಿನ ಬಿಲ್ ಗಳನ್ನು ಹಣ, ಚೆಕ್, ಡೆಬಿಟ್, ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಲು ಅವಕಾಶ, 1 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಆನ್‌ಲೈನ್‌ನಲ್ಲಿ ಪಾವತಿಸಬೇಕು.
– 24*7 ಗಂಟೆ ಟೋಲ್ ಫ್ರೀ ನಂಬರ್, ಹೊಸ ಸಂಪರ್ಕ, ಸಂಪರ್ಕ ಕಡಿತ, ಮರುಸಂಪರ್ಕ, ಸಂಪರ್ಕವನ್ನು ಬದಲಾಯಿಸುವುದು, ಹೆಸರು ಮತ್ತು ವಿವರಗಳಲ್ಲಿ ಬದಲಾವಣೆ, ಲೋಡ್ ಬದಲಾವಣೆ, ಮೀಟರ್ ಬದಲಾವಣೆಗಳಿಗೆ ವೆಬ್ ಆಧಾರಿತ ಅಪ್ಲಿಕೇಶನ್ ವ್ಯವಸ್ಥೆ ತರಬೇಕು. ಎಸ್‌ಎಂಎಸ್ / ಇಮೇಲ್ ಎಚ್ಚರಿಕೆಗಳು, ಆನ್‌ಲೈನ್ ಮೂಲಕ ಸ್ಟೇಟಸ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ.
ಕರಡು ನಿಯಮಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಬಹುದು – Drafts Electricity (Rights of Consumers) Rules, 2020