ಬಿಗ್ ಮನೆಗೆ ಅರವಿಂದ್ ಎಂಟ್ರಿಕೊಟ್ಟ ಬೈಕ್ ಬಂದಿದೆ. ಅರವಿಂದ್‍ಗೆ ಎಷ್ಟು ಖುಷಿ ಆಯ್ತೋ ಅಷ್ಟೇ ಖುಷಿ ಮನೆಮನೆಯ ಉಳಿದ ಸದಸ್ಯರಿಗೂ ಆಗಿದೆ. ಅರವಿಂದ್ ತಮ್ಮ ಜರ್ನಿ ಬಗ್ಗೆ ಹೇಳಿದ ಬಳಿಕ ತನ್ನ ಪ್ರತಿ ಸ್ಪರ್ಧಿಗಳು ಕೂಡ ಅರವಿಂದ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಅರವಿಂದ್ ನನಗೆ ಉತ್ತಮ ಸ್ನೇಹಿತ, ನನಗೆ ಟಾಸ್ಕ್ ವಿಷಯದಲ್ಲಿ ನನಗೆ ತುಂಬಾ ಸ್ಪೂರ್ತಿ ಆಗ್ತಿರಿ. ಯಾವತ್ತು ಖುಷಿಯಾಗಿ ಇರೋಕೆ ಇಷ್ಟ ಪಡುತ್ತೀರಿ ಇದು ನನಗೆ ತುಂಬಾ ಇಷ್ಟ ಆಗುತ್ತೆ ಎಂದು ದಿವ್ಯ ಸುರೇಶ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ.
ನನಗೆ ಅರವಿಂದ್ ಬೈಕ್ ರೇಸರ್ ಎಂದು ಕೇಳಿದ ಬಳಿಕ ನನಗೆ ಅವರನ್ನು ಈ ಮನೆಯಲ್ಲಿ ಕಾಣಲು ತುಂಬಾ ಸಂತೋಷ ಪಟ್ಟಿದ್ದೀನಿ. ನನಗೆ ಪ್ರಬಲವಾದ ಪ್ರತಿ ಸ್ಪರ್ಧಿಯಾಗಿ ಅರವಿಂದ್‍ನ್ನು ಕಂಡಿದ್ದೇನೆ. ಒಬ್ಬ ವ್ಯಕ್ತಿ ಅವನ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಬೇಕು ಎನ್ನುವುದಕ್ಕೆ ಅರವಿಂದ್ ಉತ್ತಮ ಉದಾಹರಣೆ. ಒಬ್ಬ ವ್ಯಕ್ತಿನ ನಂಬಿದರೆ ತುಂಬಾ ಚೆನ್ನಾಗಿ ನೋಡುಕೊಳ್ಳುತ್ತೀಯ ಎಂಬುದನ್ನು ನೀನು ನನಗೆ ತೋರಿಸಿಕೊಟ್ಟಿದ್ದೀಯ ಎಂದು ನಗುತ್ತಲೆ ಮಂಜು ತನ್ನ ಎದುರಾಳಿ ಅರವಿಂದ್ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್
ಬೈಕ್ ರೇಸಿಂಗ್ ಬಗ್ಗೆ ನಾನು ಟಿವಿಯಲ್ಲಿ ನೋಡಿದ್ದೆ ಅಷ್ಟೆ. ಆದರೆ ನಿಮ್ಮನ್ನು ಈ ಮನೆಯಲ್ಲಿ ನೋಡಿದ ಬಳಿಕ ತುಂಬಾ ಹೆಮ್ಮೆ ಅನಿಸಿತು. ನೀವು ಈ ಮನೆಯಲ್ಲಿ ಎಲ್ಲರೊಂದಿಗು ಹೊಂದಿಕೊಂಡು ಇಷ್ಟು ವಾರ ಬಂದಿರುವುದು ತುಂಬಾ ಖುಷಿ ಆಯ್ತು. ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡುತ್ತೀರಿ ಇದೆಲ್ಲ ನನಗೆ ಹಿಡಿಸಿದೆ ಎಂದು ವೈಷ್ಣವಿ ತಿಳಿಸಿದರು.
ಬಳಿಕ ಬಂದ ಪ್ರಶಾಂತ್ ಸಂಬರಗಿ, ನಾನು ಅರವಿಂದ್‍ನ ಮೊದಲ ಬಾರಿಗೆ ನೋಡಿದ್ದ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಕಾಣದೆ ಇಂದಿಗೂ ಕೂಡ ಹಾಗೆ ಇದೆ. ಅರವಿಂದ್ ಅವರ ಫಿಟ್ನೆಸ್ ಒಬ್ಬ ಕ್ರಿಕೆಟ್ ಆಟಗಾರನ ಫಿಟ್ನೆಸ್‍ಗಿಂತಲು ಮಿಗಿಲಾಗಿದೆ. ಅವರೊಂದಿಗಿದ್ದಿದ್ದು ನನಗೆ ತುಂಬಾ ಅಭಿಮಾನ ಮೂಡಿಸಿದೆ ಎಂದರು.
ಅರವಿಂದ್ ಬಗ್ಗೆ ನೀವೆಲ್ಲರೂ ಹೇಳಿದ್ದೀರಿ. ಅರವಿಂದ್ ಎಂದರೆ ನನಗೆ ತುಂಬಾ ಗೌರವ. ನಾನು ಈ ಮನೆಯಲ್ಲಿ ಅರವಿಂದ್ ಜೊತೆ ತುಂಬಾ ಸಂತೋಷದಿಂದ ಕಳೆದಿದ್ದೇನೆ ನಾನು ಅರವಿಂದ್ ಅವರನನ್ನು ಸಂಭ್ರಮಿಸುತ್ತೇನೆ. ಅರವಿಂದ್ ಎಂದರೆ ತುಂಬಾ ಇಷ್ಟ ಎಂದು ದಿವ್ಯಾ ಉರುಡಗ ಮನದ ಮಾತು ಬಿಚ್ಚಿಟ್ಟರು.
ಮನೆಯವರೆಲ್ಲರ ಅಭಿಪ್ರಾಯದ ಬಳಿಕ ಅರವಿಂದ್, ನಾನು ಈ ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಇಷ್ಟು ದಿನ ಕಳೆದಿರುವುದಕ್ಕೆ ತುಂಬಾ ಖುಷಿ ಆಗುತ್ತೆ. ಮುಂದಿನ ದಿನಗಳಲ್ಲಿ ನನ್ನೊಂದಿಗೆ ಇದೇ ಸ್ನೇಹ ಮುಂದುವರಿಸಿ ಎಂದು ಎಲ್ಲರೊಂದಿಗು ಕೇಳಿಕೊಂಡರು.