ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು. ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸಿದ ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಈ ವೇಳೆ ಅರವಿಂದ್ ಹಾಗೂ ಪ್ರಶಾಂತ್ ಮಧ್ಯೆ ತುಪ್ಪದ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ.
ಊಟ ಮಾಡುವ ವೇಳೆ ವೈಷ್ಣವಿ ಎಲ್ಲರಿಗೂ ಒಂದು ಕಡೆಯಿಂದ ತುಪ್ಪ ಬಡಿಸಿಕೊಂಡು ಬರುತ್ತಿರುತ್ತಾರೆ. ಈ ವೇಳೆ ಅರವಿಂದ್‍ಗೆ ಎರಡು ಬಾರಿ ತುಪ್ಪ ಬಡಿಸಿದ್ಯಾ ಎಂದು ಪ್ರಶಾಂತ್ ಹೇಳುತ್ತಾರೆ.
ಆಗ ಅರವಿಂದ್ ನೀವು ನನ್ನ ತಟ್ಟೆ ಯಾಕೆ ನೋಡುತ್ತೀರಾ? ನೀವು ಊಟ ಮಾಡಿ, ನಿಮಗೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ. ನನ್ನ ಸುದ್ದಿಗೆ ಯಾಕೆ ಬರುತ್ತೀರಾ, ಅರವಿಂದ್‍ಗೆ ಎರಡು ಬಾರಿ ಹಾಕಿದ್ಯಾ, ನಾಲ್ಕು ಬಾರಿ ಹಾಕಿದ್ಯಾ ಅಂತ ನೀವು ಹಾಕಿಸಿಕೊಳ್ಳಿ ಪ್ರಶಾಂತ್‍ರವರೇ ಎನ್ನುತ್ತಾರೆ. ಈ ವೇಳೆ ಮನೆಯ ಸದಸ್ಯರು ಪರವಾಗಿಲ್ಲ ಇಂದು ಜಗಳ ಬೇಡ ಎಂದು ಸಮಾಧಾನ ಪಡಿಸುತ್ತಾರೆ. ಆಗ ಪ್ರಶಾಂತ್‍ರವರು ಯಾವಾಗಲೂ ನನ್ನ ತಂಟೆಗೆ ಬರುತ್ತಾರೆ. ಯುಗಾದಿಗಾದರೂ ಬಿಟ್ಟು ಬಿಡಿ ಎಂದು ಕೆಂಡಾಕಾರಿದ್ದಾರೆ.
ನಂತರ ಈ ಬಗ್ಗೆ ಬಾತ್ ರೂಮ್ ಏರಿಯಾದಲ್ಲಿ ಚಕ್ರವರ್ತಿ ಆ ರೀತಿ ಒಪನ್ ಕಮೆಂಟ್ ಮಾಡಬಾರದು ಎಂದು ಅರವಿಂದ್‍ಗೆ ಹೇಳಿದಾಗ, ಅವರೇ ಮಾಡುತ್ತಾರೆ. ನಾವು ಅವರಷ್ಟು ಮಾಡುವುದಿಲ್ಲ. ಅವರು ಮಾಡುವಾಗ ನಾವು ಮುಚ್ಚಿಕೊಂಡು ಇರುವುದಿಲ್ವಾ ಎನ್ನುತ್ತಾರೆ. ಆಗ ಚಕ್ರವರ್ತಿ ನಾನು ಹೇಳುವುದೆಂದರೆ ಎಲ್ಲರ ಎದುರಿಗೆ ಒಪನ್ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಊಟ ತಿಂಡಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಬಂದರೆ ಆ ವಿಚಾರವನ್ನು ಖಾಸಗಿಯಾಗಿ ಇಡುತ್ತೇನೆ ಎಂದು ಹೇಳುತ್ತಾರೆ.