ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಆರಂಭವಾದಾಗ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಇವರಿಬ್ಬರ ನಡುವಿನ ಆಲೋಚನೆ, ಹೊಂದಾಣಿಕೆ, ಪ್ರೀತಿ ಎಲ್ಲವನ್ನು ನೋಡಿ ದೊಡ್ಮನೆ ಮಂದಿ ಇವರಿಬ್ಬರ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಆದರೆ ನಿನ್ನೆ ಶುಭ ಪೂಂಜಾ ದಿವ್ಯಾ ಬಗ್ಗೆ ಅರವಿಂದ್ ಜೊತೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ಅರವಿಂದ್ ದಿವ್ಯಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನೇರವಾಗಿ ಶುಭ ಜೊತೆ ಹಂಚಿಕೊಂಡಿದ್ದಾರೆ. ನಿನ್ನೆ ದಿವ್ಯಾ ಉರುಡಗಗೆ ಅರವಿಂದ್‍ನನ್ನು ಮದುವೆ ಆಗ್ತೀನಿ ಅಂದರೆ ನಿಮ್ಮ ಮನೆಯಲ್ಲಿ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದ್ದೆ. ಇದಕ್ಕೆ ದಿವ್ಯಾ ಹಾಗೇನಾದರೂ ನಾನು ನಿಜವಾಗಿಯೂ ಇಷ್ಟಪಡುತ್ತಿದ್ದೇನೆ ಅಂದ್ರೆ ನಮ್ಮ ಮನೆಯಲ್ಲಿ ಯಾವುದೇ ಅಭ್ಯಂತರವಿರುವುದಿಲ್ಲ. ಈ ಬಗ್ಗೆ ಮೊದಲಿಗೆ ಅರವಿಂದ್ ಅಭಿಪ್ರಾಯ ಕೇಳಿ ಎಂದು ಹೇಳಿದ್ದಾಳೆ ಎಂದು ಶುಭ ಅರವಿಂದ್‍ಗೆ ಹೇಳುತ್ತಾರೆ.
ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.
ನಂತರ ಶುಭ ಬಿಗ್‍ಬಾಸ್ ಮನೆಯೊಳಗೆ ಇದ್ದು ನಿಜವಾಗಿಯೂ ನೀವಿಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟರೆ ಹೊರಗಡೆ ಹೋಗಿ ಕೂಡ ನಾಲ್ಕು ತಿಂಗಳು ಸಮಯ ಕಳೆಯಿರಿ. ನಂತರ ನಿಮ್ಮಿಬ್ಬರಿಗೂ ಒಪ್ಪಿಗೆ ಇದ್ದರೆ ಮುಂದುವರೆಸಿಕೊಂಡು ಹೋಗಿ ಎಂದು ಟಿಪ್ಸ್ ನೀಡುತ್ತಾರೆ. ಒಟ್ಟಾರೆ ಬಿಗ್‍ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಅರವಿಂದ್ ದಿವ್ಯಾ ಲವ್‍ಸ್ಟೋರಿ ನಡಿತಿದೆ ಎಂದರೆ ತಪ್ಪಾಗಲಾರದು.