ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಒಂದು ಗೇಮ್ ಕೊಟ್ಟಿದ್ದರು. ಬೌಲ್‍ನಲ್ಲಿ ಕೆಲವು ಪ್ರಶ್ನೆಗಳಿರುವ ಚೀಟಿಗಳನ್ನು ಇಡಲಾಗಿತ್ತು. ಅದರಲ್ಲಿ 2 ಚೀಟಿಗಳನ್ನು ಎತ್ತಿಕೊಂಡು ಅಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕಿತ್ತು. ಆಗ ದಿವ್ಯಾ ಉರುಡುಗ ತಮಗೆ ಬಂದಿರುವ ಎಲ್ಲಾ ಪ್ರಶ್ನೆಗಳಿಗೆ ಅರವಿಂದ್.. ಅರವಿಂದ್ ಎಂದು ತುಂಬಾ ಪ್ರೀತಿಯಿಂದ ಉತ್ತರಿಸಿದ್ದಾರೆ.
ಈ ಮನೆಯಿಂದ ನಿಮ್ಮ ಲೈಫ್ ಲಾಂಗ್ ಫ್ರೆಂಡ್ ಯಾರಾದರೂ ಆಗಬಹುದು ಎಂದು ಅನ್ನಿಸಿದರೆ ಯಾರು ಮತ್ತೆ ಯಾಕೆ? ಎನ್ನುವ ಪ್ರಶ್ನೆಗೆ ದಿವ್ಯಾಗೆ ಬಂದಿತ್ತು. ಪ್ರಶ್ನೆಯನ್ನು ದಿವ್ಯಾ ಓದಿ ಹೇಳುತ್ತಿದ್ದಂತೆ ಮನೆಮಂದಿ ಓ… ಎಂದು ಕಿರುಚಾಡಲು ಪ್ರಾರಂಭಿಸಿದ್ದರು. ತುಂಬಾ ಕಷ್ಟವಾದ ಪ್ರಶ್ನೆ ದಿವ್ಯಾ ಹೇಗೆ ಉತ್ತರಿಸುತ್ತೀಯಾ ಎಂದು ಮನೆ ಮಂದಿ ಹೇಳಿತ್ತಿದ್ದರು. ಆಗ ಮಾತು ಮುಂದುವರೆಸಿದ ದಿವ್ಯಾ ಹೌದು ನನಗೆ ಈ ಮನೆಯಲ್ಲಿ ಅರವಿಂದ್ ನಾನು ತುಂಬಾ ಹೊಂದಿಕೊಂಡು ಇದ್ದೇವೆ. ಅವರ ಜೊತೆಗೆ ಇದ್ದರೇ ನಾನು ಅರಾಮ್ ಮತ್ತು ಖುಷಿಯಾಗಿ ಇರುತ್ತೇನೆ ಅದಕ್ಕಿಂತ ಇನ್ನೇನು ಬೇಕು ಎಂದು ದಿವ್ಯಾ ತುಂಬಾ ಪ್ರೀತಿಯಿಂದ ಹೇಳಿದ್ದಾರೆ.
ಈ ಮನೆಯಲ್ಲಿರವ ಸದಸ್ಯರಲ್ಲಿ ನಿಮಗೆ ಟಪ್ ಕಾಂಪಿಟೆಟರ್ ಸ್ಪರ್ಧಿಗಳು ಯಾರು? ಎನ್ನುವ ಪ್ರಶ್ನಗೆ ಉತ್ತರಿಸಿದ ದಿವ್ಯಾ ನನಗೆ ಅರವಿಂದ್ ಮತ್ತು ಮಂಜು ಇಬ್ಬರು ಸ್ಪರ್ಧಿಗಳಾಗಿದ್ದಾರೆ. ಅರವಿಂದ್ ತುಂಬಾ ಟಪ್ ಕಾಂಪಿಟೆಟರ್ ಆಗಿದ್ದಾರೆ. ದಿ ಬೆಸ್ಟ್ ಆಡುತ್ತಾರೆ. ನಾನು ಗೆದ್ದು ಮುಂದೆ ಸಾಗಬೇಕು ಎಂದರೆ ನಾನು ಅವರೊಂದಿಗೆ ಆಡಬೇಕು ಎಂದು ದಿವ್ಯಾ ಹೇಳಿದ್ದಾರೆ.
ದಿವ್ಯಾ ತನಗೆ ಬಂದಿರುವ ಎಲ್ಲಾ ಪ್ರಶ್ನೆಗಳಿಗೆ ಅರವಿಂದ್ ಎಂದು ಉತ್ತರಿಸಿದ್ದಾರೆ. ಜೋಡಿ ಟಾಸ್ಕ್ ನಿಂದ ಶುರುವಾದ ಈ ಇಬ್ಬರು ಸ್ನೇಹ ಕೊನೆಯ ಹಂತರದವರೆಗೂ ಹೀಗೆ ಇರುತ್ತಾ. ಬಿಗ್‍ಬಾಸ್ ಆಟದಲ್ಲಿ ಏನೇಲ್ಲಾ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.