ಬೆಂಗಳೂರು: 119 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಅದ್ಧೂರಿಯಾಗಿ ತೆರೆ ಬೀಳುತ್ತಿದೆ. ಬಿಗ್‍ಬಾಸ್ ಶೋನಲ್ಲಿ ಬೈಕ್ ರೇಸರ್ ಅರವಿಂದ್ ಗೆಲುವಿಗಾಗಿ ಎಕ್ಸ್ ಪಲ್ಸ್ ರಿಲಿವ್ ಇನ್ಡೋರೋ (XPULSE RELIVE ENDURO ) ತಂಡದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. 8 ರಿಂದ 10 ಜನರಿರುವ ತಂಡದಿಂದ ಅರವಿಂದ್ ಗೆಲ್ಲಲಿ ಎಂದು ವಿಶ್ ಮಾಡುವ ಮೂಲಕ ಬೈಕ್ ರೇಸ್ ಮಾಡಲಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ನಗರದ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುವ ವೇದಿಕೆಯಲ್ಲಿ ‘ಬಿಗ್ ಬಾಸ್ ಸೀಸನ್ 8’ರ ವಿನ್ನರ್ ಯಾರು ಅನ್ನೋದು ಇಂದು ರಾತ್ರಿ ಬಹಿರಂಗವಾಗಲಿದೆ. ಇಂದು ಸಂಜೆ 6 ಗಂಟೆಗೆ ಫಿನಾಲೆ ಶುರುವಾಗಲಿದೆ. ರಾತ್ರಿ 11ರ ತನಕ ಫಿನಾಲೆ ಎಪಿಸೋಡ್ ನಡೆಯಲಿದೆ.
Advertisement
Advertisement
ಈಗಾಗಲೇ ಮನೆಯಿಂದ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರ ಬಂದಿದ್ದಾರೆ. ಅಂತಿಮ ಹಂತದಲ್ಲಿ ಮಂಜು ಪಾವಗಡ, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಇದ್ದಾರೆ.
Advertisement
Advertisement
ಬಿಗ್‍ಬಾಸ್ ಗೆದ್ದವರಿಗೆ 53 ಲಕ್ಷ ರೂಪಾಯಿ, ರನ್ನರ್ ಅಪ್‍ಗೆ 11 ಲಕ್ಷ ರೂಪಾಯಿ, ಮೂರನೇ ಸ್ಥಾನದವರಿಗೆ 6 ಲಕ್ಷ ರೂಪಾಯಿ, ನಾಲ್ಕನೇ ಸ್ಥಾನದವರಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನದವರಿಗೆ 2.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಬಿಗ್‍ಬಾಸ್ ಮನೆಯಲ್ಲಿ ಟಾಪ್ 5 ಅಲ್ಲಿ ಇರುವ ನೀವು ಯಾರೂ ಖಾಲಿ ಕೈಯಿಂದ ವಾಪಸ್ ಹೋಗಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಅರವಿಂದ್ ಬೈಕ್ ರೈಡಿಂಗ್ ಮೆಚ್ಚಿ, ಬಿಗ್‍ಮನೆಯ ಪಯಣ ಬಿಚ್ಚಿಟ್ಟ ಮನೆಮಂದಿ
ಬಿಗ್‍ಬಾಸ್ ಸ್ಪರ್ಧಿಗಳಿಗೆ ಸಿಗುತ್ತಿರುವ ಬಹುಮಾನದ ಮೊತ್ತದ ಹಣದಲ್ಲಿ ಏರಿಕೆಯಾಗಿದೆ. ಪ್ರತಿ ಬಾರಿ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಈ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು ರನ್ನರ್ ಅಪ್‍ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಟಾಪ್ 5ರಲ್ಲಿರುವ ಎಲ್ಲರಿಗೂ ಮೊತ್ತ ನೀಡಲಾಗುತ್ತಿದೆ. ಇದನ್ನೂ ಓದಿ: ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್