ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯ ವೇಳೆ ಅರವಿಂದ್ ಕೈಯಲ್ಲಿ ಮಗು ನಗುವುದನ್ನು ನೋಡಿ ದಿವ್ಯಾ ಉರುಡುಗ ಬಿದ್ದು ಬಿದ್ದು ನಕ್ಕ ಪ್ರಸಂಗ ನಡೆಯಿತು.
ಮೊದಲ ರೌಂಡ್‌ನ ಎಲಿಮಿನೇಷನ್‌ನಲ್ಲಿ ದಿವ್ಯಾ ಉರುಡುಗ ಸೇಫ್ ಆದ ಬಳಿಕ ಎರಡನೇ ರೌಂಡ್ ನಡೆಯಿತು. ಅಳುತ್ತಿರುವ ಮಗುವನ್ನು ಸಮಾಧಾನ ಮಾಡಿ ಯಾರ ಕೈಯಲ್ಲಿ ನಗುತ್ತದೋ ಆ ಸದಸ್ಯ ಸೇಫ್ ಎಂದು ಬಿಗ್ ಬಾಸ್ ಘೋಷಿಸಿದರು.
Advertisement
Advertisement
ಚಕ್ರವರ್ತಿ ಚಂದ್ರಚೂಡ್, ಶಮಂತ್ ಆದ ಬಳಿಕ ಮಗು ಅರವಿಂದ್ ಕೈಯಲ್ಲಿ ಬಂತು. ಅರವಿಂದ್ ಹೆಗಲ ಮೇಲೆ ಹಾಕಿ ಸಮಾಧಾನ ಮಾಡುವುದನ್ನು ನೋಡಿದ ನೋಡಿ ಶುಭ ಪೂಂಜಾ, “ಇಷ್ಟು ಪಕ್ಕ ರೆಡಿ ಮಾಡಿ ಬಿಟ್ರಾ ನೀವು?” ಎಂದು ಪ್ರಶ್ನಿಸಿ ದಿವ್ಯಾ ಉರುಡುಗ ಅವರ ಕಾಲೆಳೆದರು. ಅರವಿಂದ್ ಬಳಿಕ ರಾಜೀವ್, ವಿಶ್ವನಾಥ್, ಮಂಜ, ದಿವ್ಯಾ ಸುರೇಶ್ ಅವರ ಬಳಿ ಹೋದರೂ ಮಗು ಮಾತ್ರ ನಗಲಿಲ್ಲ.
Advertisement
Advertisement
ಎರಡನೇ ರೌಂಡ್ ಆರಂಭದಲ್ಲಿ ಚಕ್ರವರ್ತಿ ಅವರು ಮಗುವನ್ನು ಕೆಳಗಡೆ ಮಲಗಿಸಿ ಹಾಡು ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರೂ ಮಗು ಅಳುತ್ತಲೇ ಇತ್ತು. ನಂತರ ಶಮಂತ್ ಪ್ರಯತ್ನ ಪಟ್ಟರೂ ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ. ಬಳಿಕ ಮಗು ಅರವಿಂದ್ ಕೈಗೆ ಬಂತು. ಆರಂಭದಲ್ಲಿ ಅಳುತ್ತಿದ್ದ ಮಗು ಕೆಲ ಸೆಕೆಂಡ್‌ನಲ್ಲಿ ನಗಲು ಆರಂಭಿಸಿತು. ಅರವಿಂದ್ ಕೈಯಲ್ಲಿ ಮಗು ನಕ್ಕಿದ್ದನ್ನು ನೋಡಿ ದಿವ್ಯಾ ಉರುಡುಗ ಎರಡು ಕೈಯನ್ನು ಕೆನ್ನೆಗೆ ಹಿಡಿದು ಬಿದ್ದು ಬಿದ್ದು ನಗಲು ಆರಂಭಿಸಿದರು. ಈ ವೇಳೆ ಬಿಗ್ ಮನೆಯ ಸದಸ್ಯರು ಸಹ ನಕ್ಕು ಅರವಿಂದ್ ಅವರನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಈ ಸಂದರ್ಭಲ್ಲಿ ಬಿಗ್ ಬಾಸ್,”ಅರವಿಂದ್ ನೀವು ಸೇಫ್ ಆಗಿದ್ದೀರಿ ಅಭಿನಂದನೆಗಳು” ಎಂದು ಹೇಳಿದಾಗ ಅರವಿಂದ್ ಧನ್ಯವಾದ ಹೇಳಿದರು. ಬಳಿಕ ಅರವಿಂದ್ ಶುಭಾ ಪೂಂಜಾ ಕೈಯಲ್ಲಿರುವ ಗೊಂಬೆಯನ್ನು ಪಡೆಯಲು ಮುಂದಾದಾಗ ಕೂಡಲೇ ಬಂದ ದಿವ್ಯಾ ಉರುಡುಗ, “ಎಲ್ಲರಿಗೂ ಥ್ಯಾಂಕ್ಯೂ ಹೇಳಿಲ್ಲ” ಎಂದು ಹೇಳಿ ಅರವಿಂದ್ ಅವರನ್ನು ಎಚ್ಚರಿಸಿದರು. ಕೂಡಲೇ ಅರವಿಂದ್ ಕೈ ಮುಗಿದು,”ವೋಟ್ ಮಾಡಿದ ಎಲ್ಲ ಕನ್ನಡಿಗರಿಗೆ ಧನ್ಯವಾದಗಳು. ಮುಂದೆ ನಾನು ಪ್ರತಿ ವಾರ ನಾಮಿನೆಟ್ ಆಗಬಹುದು. ಹೀಗಾಗಿ ನನಗೆ ವೋಟ್ ಮಾಡಿ” ಎಂದು ವಿನಂತಿ ಮಾಡಿಕೊಂಡರು.
ಸದಸ್ಯರ ಕೈಗೆ ಮಗುವಿನ ಗೊಂಬೆಯನ್ನು ನೀಡಿ ಅಳುವ ಮತ್ತು ನಗುವ ಮ್ಯೂಸಿಕ್ ಪ್ಲೇ ಮಾಡಿದ ಈ ರೌಂಡ್ ಬಿಗ್ ಮನೆಯ ಸದಸ್ಯರಿಗೆ ಭರಪೂರ್ಣ ಮನರಂಜನೆಯನ್ನು ನೀಡಿತು. ಇದನ್ನೂ ಓದಿ: ನಿನ್ನ ಜೊತೆ ನಾನಿದ್ದೇನೆ- ದಿವ್ಯಾ ಬೆನ್ನಿಗೆ ನಿಂತ ಅರವಿಂದ್