ಬಿಗ್‍ಬಾಸ್ ಮನೆಯ ಕ್ಯೂಟ್ ಕಪಲ್ ಅಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಂದೇ ಹೇಳಬಹುದು. ಬಿಗ್‍ಬಾಸ್ ಮನೆಯಲ್ಲಿ ಎಲ್ಲೆ ನೋಡಿದರು ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಯಾವುದೇ ಟಾಸ್ಕ್ ನೀಡಿದರೂ ಇಬ್ಬರು ಅದನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ. ಇವಬ್ಬರ ನಡುವಿನ ಹೊಂದಾಣಿಕೆ, ಕಾಳಜಿ, ಪ್ರೀತಿ ನೋಡಿದ ಮನೆಮಂದಿ ಈ ಜೋಡಿ ಒಂದಾದರೆ ಎಷ್ಟು ಚೆಂದ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ಕೆಲವು ದಿನಗಳಿಂದ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ದಿವ್ಯಾ ಉರುಡಗ ಬಗ್ಗೆ ಅರವಿಂದ್ ಹೆಚ್ಚು ಕಾಳಜಿ ತೋರಿತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಅರವಿಂದ್ ದಿವ್ಯಾ ಉರುಡುಗ ಬಟ್ಟೆಯನ್ನು ಒಗೆದಿದ್ದಾರೆ.
ನಿನ್ನೆ ಅರವಿಂದ್ ಬಟ್ಟೆ ಒಗೆದಿರುವುದನ್ನು ನೋಡಿ ದಿವ್ಯಾ ಉರುಡುಗ ಶಾಕ್ ಆಗಿದ್ದಾರೆ. ಇದಕ್ಕೆ ವೈಷ್ಣವಿ ದಿವ್ಯಾ ಉರುಡುಗ ಯಾಕೆ ಶಾಕ್ ಆಗಿದ್ದಾರೆ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ಏನಿಲ್ಲಾ ಇಷ್ಟೇ ಎಂದು ದಿವ್ಯಾ ಉರುಡುಗ ಪ್ಯಾಟ್ ಒಗೆದಿರುವುದನ್ನು ತೋರಿಸುತ್ತಾರೆ.
ಬಳಿಕ ಏನಾಗಿಲ್ಲ, ಬಟ್ಟೆ ಅಷ್ಟೇ ಒಗೆದಿರುವುದು ಎಂದು ಅರವಿಂದ್ ದಿವ್ಯಾ ಉರುಡುಗಗೆ ಸಮಾಧಾನ ಪಡಿಸುತ್ತಾ, ಬಟ್ಟೆ ಕೊಟ್ಟು ಇಚೆ ಒಣಗಾಕು ಎನ್ನುತ್ತಾರೆ. ಆಗ ದಿವ್ಯಾ ಯಾಕೆ ಹೀಗೆ ಮಾಡಿದ್ರಿ ಎಂದಾಗ ಅನ್ನುತ್ತಾ ಅರವಿಂದ್ ಕೆನ್ನೆ ಮೇಲೆ ಕೈನಿಂದ ಪ್ರೀತಿಯಿಂದ ಸವರಿ ಹೋಗುತ್ತಾರೆ.
ನಂತರ ನನಗೆ ಒಂಥರಾ ಅನಿಸುತ್ತಿದೆ ಎಂದು ವೈಷ್ಣವಿ ಬಳಿ ಹೇಳುತ್ತಾರೆ. ಅದಕ್ಕೆ ವೈಷ್ಣವಿ ಮತ್ತೊಂದು ಬಾರಿ ನೀವು ಒಗೆದು ಕೊಡಿ ಅಷ್ಟೇ ಎಂದು ಸಲಹೆ ನೀಡುತ್ತಾರೆ.