ಬಿಗ್‍ಬಾಸ್ ಮನೆಯ ಕೊನೆಯ ದಿನದಂದು ದೊಡ್ಮನೆ ಸ್ಪರ್ಧಿಗಳು ತಮಗೆ ಅರಿವಿಲ್ಲದೇ ಗ್ರಾಂಡ್ ಫಿನಾಲೆಗೆ ರೆಡಿಯಾಗುವಂತೆ ಫುಲ್ ಟಿಪ್ ಟಾಪ್ ಆಗಿ ಮಿಂಚುತ್ತಿದ್ದರು. ಈ ವೇಳೆ ಅರವಿಂದ್ ಧರಿಸಿದ್ದ ಉಡುಪಿಗೆ ಮ್ಯಾಚ್ ಆಗುವಂತಹ ಸೀರೆಯನ್ನು ದಿವ್ಯಾ ಉರುಡುಗ ಎತ್ತಿಟ್ಟಿದ್ದ ವಿಚಾರವನ್ನು ಕಣ್ಮಣಿ ರಿವೀಲ್ ಮಾಡಿದ್ದಾಳೆ.
ಕಣ್ಮಣಿ ಉಡುಪಿನ ಬಗ್ಗೆ ಮನೆಯ ಸ್ಪರ್ಧಿಗಳೊಂದಿಗೆ ಮಾತನಾಡುವ ವೇಳೆ ಅರವಿಂದ್ ನಿಮ್ಮ ಬಳಿ ಎಷ್ಟು ಬಟ್ಟೆಗಳಿದೆ ಎಂದು ಕೇಳಿದ್ದಾರೆ. ಅದಕ್ಕೆ ಅರವಿಂದ್ ನನ್ನ ಬಳಿ ಈ ಸೀಸನ್ ಮುಗಿಯುವವರೆಗೂ ಹೊಸ ಬಟ್ಟೆಗಳಿದೆ ಎನ್ನುತ್ತಾರೆ. ನಿಮ್ಮ ಬಳಿ ಇರುವ ಸ್ಟಾಕ್‍ಗೂ ನಿಮ್ಮ ಬಳಿ ಇರುವ ಕಾನ್ಫಿಡೆಂಟ್‍ಗೂ ಏನಾದರು ಸಂಬಂಧ ಇದ್ಯಾ ಎಂದು ಪ್ರಶ್ನಿಸಿದಾಗ ಯಾವುದೇ ಸಂಬಂಧವಿಲ್ಲ. ಬರಬೇಕಾದರೆನೇ ನಾನು ಎಲ್ಲ ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದೇನೆ ನನ್ನ ಹತ್ತಿರ ಬಹಳಷ್ಟು ಬಟ್ಟೆಗಳಿದೆ ಎಂದಿದ್ದಾರೆ.
ನೀವು ಇವತ್ತು ಹಾಕಿಕೊಂಡಿರುವ ಕಾಸ್ಟೂಮ್‍ಗೆ ಮ್ಯಾಚಿಂಗ್ ಸ್ಯಾರಿ ದಿವ್ಯಾ ಎತ್ತಿಟ್ಟಿದ್ದರು ಅಂದಾಗ ಅರವಿಂದ ನಾಚಿಕೆಯಿಂದ ಹೌದು ಎಂದು ಉತ್ತರಿಸುತ್ತಾರೆ. ದಿವ್ಯಾ ವಾಯ್ಸ್ ಕೇಳಿ ಹೇಗೆ ಅನಿಸಿತು ಎಂದಾಗ ಸಖತ್ ಆಗಿತ್ತು. ಬಹಳ ಖುಷಿಯಾಯ್ತು. ಅವಳಿಗೆ ಸ್ವಲ್ಪ ಎನರ್ಜಿ ಬಂದಿದೆ. ಈಗ ಅವಳ ಹೆಲ್ತ್, ರೈಟ್ ಡೈರೆಕ್ಷನ್‍ನಲ್ಲಿದೆ. ನಾವು ಕೇಳಿಕೊಂಡಿದ್ದನ್ನು ಗಮನದಲ್ಲಿಟ್ಟುಕೊಂಡು ಅವಳ ವಾಯ್ಸ್ ನೋಟ್ಸ್ ಕಳುಹಿಸಿದಕ್ಕೆ ನಿಮಗೆ ತುಂಬಾ ಧನ್ಯವಾದ ಎಂದು ತಿಳಿಸಿದರು.
ವೀಕೆಂಡ್‍ನಲ್ಲಿ ನಾನು ನಾಮಿನೇಟ್ ಆಗಿದ್ದರೂ ನನ್ನ ಪಕ್ಕದಲ್ಲಿ ಕುಳಿತುಕೊಂಡಿರುತ್ತಿದ್ದಳು. ಅವಳ ವಾಯ್ಸ್ ಕೇಳಿ ಬಹಳ ಖುಷಿಯಾಯಿತು ಎಂದಿದ್ದಾರೆ.