– ಬೇಡ ಹೋಗ್ಬೇಡ ಅಂತ ಹೇಳುತ್ತಿದ್ದೆ
ಬೆಂಗಳೂರು: ಅಮ್ಮ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಯಾವಾಗಲೂ ಹೇಳುತ್ತಿದ್ದ. ಆದರೆ ಇಂದು ನನ್ನ ನಡುರಸ್ತೆಯಲ್ಲಿಯೇ ಬಿಟ್ಟು ಹೋದ ಎಂದು ಫೈಟರ್ ವಿವೇಕ್ ತಾಯಿ ಕಣ್ಣೀರು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನಿಗೆ ಏನಾಯಿತು ಅಂತ ಗೊತ್ತಿಲ್ಲ. ನಾನು ಯಾರನ್ನೂ ಕೇಳಿಲ್ಲ. ಮಗ ಸತ್ತೋದ ಅಂತ ಬಂದು ಹೇಳಿದಾಗ ಅಳುತ್ತಾ ಕೂತಿದ್ದೀನಿ. ಶೂಟಿಂಗ್ ಹೋಗುವಾಗ ಚೆನ್ನಾಗಿಯೇ ಇದ್ದ. ಹೋದ ವಾರದಲ್ಲಿ ಎರಡು ದಿವಸ ಶೂಟಿಂಗ್ ಹೋಗಿದ್ದ. ಈ ವಾರದಲ್ಲಿ ಒಂದು ದಿವಸ ಇದೆ ಅಂತ ಹೇಳಿ ಹೋಗಿದ್ದ. ನಾನು ಬೇಡ ಹೋಗ್ಬೇಡ, ಹೋಗ್ಬೇಡ ಅಂತ ಹೇಳ್ತಿದ್ದೆ. ಅನ್ನ ನೀರು ತಿಂದು ಮನೆಯಲ್ಲಿ ಸಂತೋಷವಾಗಿ ಇರೋಣ ಅಂತ ಹೇಳುತ್ತಿದ್ದೆ ಎಂದರು.
Advertisement
Advertisement
ನಾನು ಪ್ರತಿ ಬಾರಿ ಈ ರೀತಿ ಹೇಳಿದಾಗಲೂ ಅವನು, ಅಮ್ಮ ನಾನು ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳಬೇಕು. ನಮಗೆ ಕಷ್ಟಗಳೇ ಬೆಳೆಯುತ್ತಿದೆ. ನಾನು ಚೆನ್ನಾಗಿ ನೋಡಿಕೊಳ್ತೀನಿ ಅಮ್ಮ. ಅದಕ್ಕಾಗಿ 10 ರೂ ಸಂಪಾನೆ ಮಾಡ್ತೀನಿ ಅಂತ ಹೇಳುತ್ತಿದ್ದ. ಹೀಗಾಗಿ ಶೂಟಿಂಗ್ ತೆರಳುತ್ತಿದ್ದ. ಆದರೆ ಈಗ ನನ್ನ ಮಗ ನನ್ನನ್ನು ಬಿಟ್ಟು ಹೊರಟು ಹೋದ. ಈಗ ನನ್ನ ಚೆನ್ನಾಗಿ ನೋಡ್ಕೊಂಡು ಬಿಟ್ಬಿಟ್ಟ ಎಂದು ಕಣ್ಣೀರಾದ್ರು. ಇದನ್ನೂ ಓದಿ: ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR
Advertisement
Advertisement
ಶೂಟಿಂಗ್ ನಲ್ಲಿ ಫೈಟ್ ಮಾಡುವುದು ಬಿಟ್ಟು 4 ವರ್ಷ ಆಗಿತ್ತು. ಇತ್ತೀಚೆಗೆ ಮಾಸ್ಟರ್ ಪೋನ್ ಮಾಡಿ ಕರೀತಾ ಇದ್ದಾರೆ ಅಂತ ಹೇಳುತ್ತಿದ್ದ. ನಾನು ಆವಗಾನೂ ಬೇಡ ಅಂದಿದ್ದೆ. ನಾವು ಅಂಬಲಿ ಅನ್ನನೇ ಕುಡಿದುಕೊಂಡು ಜೀವನ ಸಾಗಿಸೋಣ, ನಾವೇನು ಸಾಹುಕಾರರಾಗುವ ಅವಶ್ಯಕತೆ ಇಲ್ಲ. ನೆಮ್ಮದಿಯಾಗಿರೋಣ ಅಮತಿದ್ದೆ. ಆಗ ಅವನು ಇಲ್ಲ ಹೋಗ್ತೀನಿ 10 ರೂ. ಸಂಪಾದನೆ ಮಾಡಿಕೊಂಡು ಬರುತ್ತೇನೆ. ನಾವು ಹಿಂಗೆ ಇದ್ದರೆ ಮೇಲಕ್ಕೆ ಹೋಗಲು ಹೇಗೆ ಸಾಧ್ಯ ಅಂತ ಹೇಳಿ ಶೂಟಿಂಗ್ ಹೋಗುತ್ತಿದ್ದ ಎಂದರು. ಇದನ್ನೂ ಓದಿ: ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್
ನಾನು ಊರಿಗೆ ಹೋಗಿ ಬಂದಿದ್ದೆ. ಮಲಗಿದ್ದರಿಂದ ಅವನು ನನ್ನ ಜೊತೆ ಏನೂ ಹೇಳದೆ ಶೂಟಿಂಗ್ ತೆರಳಿದ್ದ. ನನ್ನ ಮಗನ ಜೊತೆ ಮಾತಾಡಿ 5 ದಿನ ಆಗಿತ್ತು ಎಂದು ಗದ್ಗದಿತರಾದರು. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ
ಬಿಡದಿ ಬಳಿಯ ತೋಟದಲ್ಲಿ ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ 35 ವರ್ಷದ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು.