ವಾಷಿಂಗ್ಟನ್: ಕೊರೊನಾ ಬಂದು ವರ್ಷ ಕಳೆದರೂ ಇದರ ತೀವ್ರತೆ ಕಡಿಮೆ ಆಗಿಲ್ಲ. ಅಮೆರಿಕ ಮತ್ತು ಯುರೋಪ್ ಖಂಡದ ದೇಶಗಳಲ್ಲಿ ಹೆಮ್ಮಾರಿ ವಿಜೃಂಭಿಸ್ತಿದೆ. ಐರೋಪ್ಯ ಒಕ್ಕೂಟದಲ್ಲಿ 17 ಸೆಕೆಂಡ್‍ಗೆ ಒಂದು ಸಂಭವಿಸುತ್ತಿದೆ. ಅಮೆರಿಕಾದಲ್ಲಿ ನಿಮಿಷಕ್ಕೊಬ್ಬರನ್ನು ಕೊರೋನಾ ಬಲಿ ಪಡೆಯುತ್ತಿದೆ.
ಗುರುವಾರ ಅಮೆರಿಕದಲ್ಲಿ 1,962 ಮಂದಿ ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 2.60 ಲಕ್ಷ ದಾಟಿದೆ. ನಿನ್ನೆ ಒಂದೇ ದಿನ 1.92 ಲಕ್ಷ ಕೇಸ್ ಬೆಳಕಿಗೆ ಬಂದಿದ್ದು, ಅಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 1.61 ಕೋಟಿ ದಾಟಿದೆ.
ಎಲೆಕ್ಷನ್ ಸೋತು ಈಗ ಕಿಡಿ ಕಾರುತ್ತಿರುವ ಟ್ರಂಪ್, ಕೊರೊನಾವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ಕೊರೊನಾ ಮಾರಣಹೋಮ ಸಂಭವಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸ್ತಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಾದಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಮನೆಯಿಂದ ಯಾರು ಹೊರಗೆ ಬಾರದಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದೆ. ಜಪಾನ್, ಪಾಕಿಸ್ತಾನ, ಆಫ್ರಿಕಾ, ಗಲ್ಫ್ ರಾಷ್ಟ್ರಗಳಲ್ಲಿಯೂ ಸೋಂಕು ವಿಜೃಂಭಿಸ್ತಿದೆ.