ಚೆನ್ನೈ: ಅಮೆರಿಕ ದೂತಾವಾಸ ಕಚೇರಿ ಚೆನ್ನೈ ಕಟ್ಟಡದ ಮೇಲೆ ರೇನ್ ಬೋ ಪ್ರೈಡ್ ಧ್ವಜವನ್ನು ಸಲಿಂಗಿ, ಗೇ, ದ್ವಿಲಿಂಗಿ, ಮಂಗಳಮುಖಿ/ಲಿಂಗಾಂತರಿ, ಕ್ವೀರ್ ಮತ್ತು ಇಂಟರ್ಸೆಕ್ಸ್ (ಎಲ್‍ಜಿಬಿಟಿಕ್ಯೂಐ +) ಪ್ರೈಡ್ ತಿಂಗಳ ಸ್ಮರಣಾರ್ಥ ಜೂನ್ 2 ರಂದು ಹಾರಿಸಿತು. ಈ ಧ್ವಜ ಜೂನ್ 30 ರವರೆಗೆ ಕಟ್ಟಡದ ಮೇಲೆ ಹಾರಾಡಲಿದೆ.
ಎಲ್‍ಜಿಬಿಟಿಕ್ಯೂಐ + ವ್ಯಕ್ತಿಗಳು ಮತ್ತು ಸಮುದಾಯಗಳ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಬದ್ಧತೆಯನ್ನು ಗಮನಿಸಿ, ಚೆನ್ನೈನ ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್, “ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್, ಯು.ಎಸ್. ಮಿಷನ್ ಟು ಇಂಡಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಾಗರಿಕರು ಸಮಗ್ರ ಕಾನೂನಿನಡಿಯಲ್ಲಿ ಸಮಾನ ರಕ್ಷಣೆ, ಹಿಂಸಾಚಾರದಿಂದ ಮುಕ್ತ ವಾತಾವರಣ ಮತ್ತು ಮೂಲಭೂತ ಮಾನವ ಹಕ್ಕುಗಳ ಮಾನ್ಯತೆಗಾಗಿ ಕೆಲಸ ಮಾಡುತ್ತಿರುವಾಗ ಜಗತ್ತಿನಾದ್ಯಂತದ ಎಲ್‍ಜಿಬಿಟಿಕ್ಯೂಐ + ಸಮುದಾಯದೊಂದಿಗೆ ನಿಲ್ಲುತ್ತಾರೆ. ಪ್ರಪಂಚದಾದ್ಯಂತ ಎಲ್‍ಜಿಬಿಟಿಕ್ಯೂಐ + ವ್ಯಕ್ತಿಗಳ ಹಕ್ಕುಗಳನ್ನು ಬೆಂಬಲಿಸಲು ಮತ್ತು ಮುನ್ನಡೆಸಲು ಅಮೆರಿಕ ತಾನೇ ಮುನ್ನಡೆಸಲು ಹೆಮ್ಮೆಪಡುತ್ತದೆ. ನಾವು ಹೆಮ್ಮೆಯಲ್ಲಿ ಒಟ್ಟಿಗೆ ನಿಲ್ಲುವಾಗ ನೀವೂ ನಮ್ಮೊಂದಿಗೆ ಈ ಪ್ರೈಡ್ ಆಚರಣೆಯಲ್ಲಿ ಒಗ್ಗೂಡಿ.,” ಎಂದು ಮನವಿ ಮಾಡಿದರು.
Advertisement
ಪ್ರೈಡ್ ತಿಂಗಳ ನೆನಪಿಗಾಗಿ, ಅಮೆರಿಕ . ದೂತಾವಾಸ ಚೆನ್ನೈ, ಅಮೆರಿಕನ್ ಫಿಲ್ಮ್ ಶೋಕೇಸ್‍ನ ಬೆಂಬಲದೊಂದಿಗೆ, ವಿದ್ಯಾರ್ಥಿಗಳು, ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು, ಕಾರ್ಯಕರ್ತರು ಮತ್ತು ಎಲ್‍ಜಿಬಿಟಿಕ್ಯೂಐ + ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಇತರರಿಗಾಗಿ “ಶೇರ್” ಎಂಬ ಸಾಕ್ಷ್ಯಚಿತ್ರವನ್ನು ವರ್ಚುವಲ್ ಆಗಿ ಪ್ರದರ್ಶಿಸುತ್ತಿದೆ. ಈ ಕಿರುಚಿತ್ರವು ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ತನ್ನ ಸಲಿಂಗಕಾಮಿ ಗುರುತನ್ನು ಬಹಿರಂಗಪಡಿಸಲು ಹೆಣಗಾಡುತ್ತಿರುವ ಯುವ ಏಷ್ಯನ್- ಅಮೆರಿಕನ್ ಇನ್‍ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್ ಕಥಾನಕವಾಗಿದೆ. ಜೂನ್ 30 ರ ವರ್ಚುವಲ್ ಸ್ಕ್ರೀನಿಂಗ್ ನಂತರ “ಶೇರ್” ಚಲನಚಿತ್ರ ನಿರ್ಮಾಪಕರಾದ ಬಾರ್ನಾ ಸ್ಜಾಸ್ ಮತ್ತು ಎಲ್ಲೀ ವೆನ್ ಮತ್ತು ನಟ ಟಿಮ್ ಚೌ ಅವರೊಂದಿಗೆ ಸಂವಾದ ನಡೆಯಲಿದೆ.
Advertisement
Advertisement
ಜೂನ್‍ನಲ್ಲಿ, ಅಮೆರಿಕನ್ ಸೆಂಟರ್ ಪ್ರೈಡ್-ಸಂಬಂಧಿತ ವಿಷಯಗಳ ಕುರಿತು ಸಂಗ್ರಹಿಸಿ ಸೂಚಿಸಲಾದ ಮಾಹಿತಿ/ಓದಿನ ಪಟ್ಟಿಯನ್ನು ಮತ್ತು “ಅಮೇರಿಕನ್ ಸಾಹಿತ್ಯದಲ್ಲಿ ಪ್ರೈಡ್ ಅನ್ನು ಗುರುತಿಸುವ” ಕುರಿತು ವರ್ಚುವಲ್ ಪ್ಯಾನಲ್ ಅನ್ನು ಆಯೋಜಿಸುತ್ತದೆ. ಎರಡೂ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವವರು [email protected].ಗೆ ಇಮೇಲ್ ಕಳುಹಿಸಬಹುದು.
Advertisement
ಮೇ 25 ರಂದು, ಯು.ಎಸ್. ಅಮೆರಿಕ ದೂತಾವಾಸ ಚೆನ್ನೈ, ಕೇರಳದ ಕೋಳಿಕ್ಕೋಡ್ ನಲ್ಲಿರುವ ದಿ ಜೆಂಡರ್ ಪಾರ್ಕ್ ಸಹಯೋಗದೊಂದಿಗೆ 70 ಕ್ಕೂ ಹೆಚ್ಚು ಮಹಿಳೆಯರು ಮತ್ತು ಲಿಂಗಾಂತರಿ ಉದ್ಯಮಿಗಳಿಗಾಗಿ 10 ವಾರಗಳ ವರ್ಚುವಲ್ ಬ್ಯುಸಿನೆಸ್ ಇಂಗ್ಲಿಷ್ ಕೋರ್ಸ್ ಅನ್ನು ಪ್ರಾರಂಭಿಸಿತು. ಲಿಂಗ ಸಮಾನತೆಯ ದಕ್ಷಿಣ ಏಷ್ಯಾದ ಕೇಂದ್ರವಾದ ಜೆಂಡರ್ ಪಾರ್ಕ್ ಯುಎನ್ ಮಹಿಳೆಯರ ಸಹಭಾಗಿತ್ವದಲ್ಲಿ ಪಾರಂಭವಾದ ಕೇರಳ ಸರ್ಕಾರದ ಒಂದು ಉಪಕ್ರಮವಾಗಿದೆ.
ನ್ಯೂಯಾರ್ಕ್ ನಗರದಲ್ಲಿ ಜೂನ್ 1969 ರಲ್ಲಿ ಸಂಭವಿಸಿದ ಸ್ಟೋನ್ವಾಲ್ ದಂಗೆಯ ಸ್ಮರಣಾರ್ಥ ಅಮೆರಿಕದಲ್ಲಿ ಜೂನ್‍ಅನ್ನು ಪ್ರೈಡ್ ತಿಂಗಳಾಗಿ ಆಚರಿಸಲಾಗುತ್ತದೆ. ಈ ಘಟನೆಯು ಅಮೆರಿಕದಲ್ಲಿನ ಆಧುನಿಕ ಗೇ ಲಿಬರೇಶನ್ ಆಂದೋಲನದ ಭವಿಷ್ಯದ ಕ್ರಿಯಾಶೀಲತೆಗೆ ಮತ್ತು ಶಾಸನ ಬದಲಾವಣೆಗೆ ದಾರಿ ಮಾಡಿಕೊಟ್ಟಿತು. ಪ್ರಪಂಚದಾದ್ಯಂತ ಪ್ರೈಡ್ ತಿಂಗಳು ನಾಗರಿಕ ಹಕ್ಕುಗಳ ಹೋರಾಟ ಮತ್ತು ಎಲ್‍ಜಿಬಿಟಿಕ್ಯೂಐ + ಸಮುದಾಯಕ್ಕೆ ಕಾನೂನಿನಡಿಯಲ್ಲಿ ಸಮಾನ ನ್ಯಾಯದ ಸಾಧ್ಯತೆಯ ಮುಂದುವರಿದ ಅನ್ವೇಷಣೆಯನ್ನು ನೆನಪಿಸುತ್ತದೆ, ಇದರ ಜೊತೆಗೆ ಎಲ್‍ಜಿಬಿಟಿಕ್ಯುಐ + ವ್ಯಕ್ತಿಗಳ ಸಾಧನೆಗಳನ್ನೂ ಸ್ಮರಿಸುತ್ತದೆ.
ಪ್ರೈಡ್ ತಿಂಗಳ ನೆನಪಿಗಾಗಿ ರೇನ್ ಬೋ ಧ್ವಜ ಅನಾವರಣದ ಸಮಯದಲ್ಲಿ ಚೆನ್ನೈನಲ್ಲಿ ಯು.ಎಸ್. ಕಾನ್ಸುಲ್ ಜನರಲ್ ಜ್ಯಡಿತ್ ರೇವಿನ್ ಅವರ ಭಾಷಣದ ಕಿರು ವೀಡಿಯೊ ಈ ಲಿಂಕ್‍ನಲ್ಲಿ ಲಭ್ಯವಿದೆ: https://www.youtube.com/watch?v=hEbBOYGqOp8