ಅಮೆರಿಕಾದಲ್ಲಿ ಅಪಘಾತ: ನಟ ನವೀನ್ ಪೊಲಿಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ

Public TV
1 Min Read
naveen shetty 1

ಮೆರಿಕಾದಲ್ಲಿ ನಡೆದ ಅಪಘಾತದಲ್ಲಿ ಆಸ್ಪತ್ರೆ ಪಾಲಾಗಿದ್ದ ತೆಲುಗಿನ ಖ್ಯಾತ ಯುವ ನಟ ನವೀನ್ ಪೊಲಿಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನುಷ್ಕಾ ಶೆಟ್ಟಿ (Anushka Shetty) ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನವೀನ್ ಪೊಲಿಶೆಟ್ಟಿ (Naveen Shetty) ಅಮೆರಿಕಾದಲ್ಲಿ (America) ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು.

naveen shetty 2

ಅಮೆರಿಕಾದ ಟೆಕ್ಸಾಸ್‍ ನ ಡಲ್ಲಾಸ್ ನಲ್ಲಿ ಅವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಬೈಕ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಸ್ಕಿಡ್ ಆಗಿದೆ. ಹಾಗಾಗಿ ಅಪಘಾತದಲ್ಲಿ (Accident) ಕೈ, ಭುಜ ಹಾಗೂ ದೇಹದ ನಾನಾ ಭಾಗಗಳಿಗೆ ಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

 

ಕಲ್ಯಾಣ್ ಶಂಕರ್ ನಿರ್ದೇಶನದ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನವೀನ್ ಶೆಟ್ಟಿ, ಕಾಮಿಡಿ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡವರು. ಜೊತೆಗೆ ಅನುಷ್ಕಾ ನಂತಹ ಸ್ಟಾರ್ ನಟಿಯ ಜೊತೆಯೂ ಅಭಿನಯಿಸಿದ್ದಾರೆ

Share This Article