ನವದೆಹಲಿ: ಎರಡು ದೇಶಗಳ ನಡುವಿನ ಸಂಬಂಧ ಉತ್ತಮವಾಗುತ್ತಿದ್ದಂತೆ ಅಮೆರಿಕದ ಸಂಗ್ರಹಾಗಾರಗಳಲ್ಲಿ ಕಚ್ಚಾ ತೈಲವನ್ನು ದಾಸ್ತಾನು ಮಾಡಲು ಭಾರತ ಮುಂದಾಗಿದೆ.
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಎರಡು ದೇಶಗಳು ತೈಲ ದಾಸ್ತಾನು ಮಾಡುವ ಸಂಬಂಧ ಸಹಿ ಹಾಕಿ ಎಂದು ತಿಳಿಸಿದರು. ಶುಕ್ರವಾರ ಧರ್ಮೇಂದ್ರ ಪ್ರಧಾನ್ ಮತ್ತು ಅಮೆರಿಕದ ಇಂಧನ ಸಚಿವ ಡಾನ್ ಬ್ರೌಲೆಟ್ ವಿಡಿಯೋ ಕಾನ್ಫೆರೆನ್ಸ್ ನಡೆಸಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.
Advertisement
Great to attend the U.S.-India Strategic Energy Partnership with @Energy Secretary @SecBrouillette, @PetroleumMin Pradhan, & Ambassador @SandhuTaranjitS #USIndia #USIndiaEnergy pic.twitter.com/nEPeuhGSD1
— U.S. Ambassador to India (@USAmbIndia) July 17, 2020
Advertisement
ಅಮೆರಿಕದಲ್ಲಿ ಯಾಕೆ?
ಕೋವಿಡ್ 19ನಿಂದಾಗಿ ಈಗ ಬೇಡಿಕೆ ಕಡಿಮೆ ಇರುವ ಕಾರಣ ತೈಲ ದರ ಕಡಿಮೆಯಿದೆ. ಹೀಗಾಗಿ ಈಗ ತೈಲವನ್ನು ಖರೀದಿಸಿ ಅಮೆರಿಕದಲ್ಲಿ ಸಂಗ್ರಹಿಸಿದರೆ ಮುಂದೆ ಲಾಭವಾಗುತ್ತದೆ. ದರ ಏರಿಕೆಯಾದಾಗ ಸಂಗ್ರಹಿಸಿರುವ ತೈಲವನ್ನು ಬಳಸುವ ಮೂಲಕ ನಿಯಂತ್ರಣಕ್ಕೆ ತರಬಹುದು ಎಂಬ ಲೆಕ್ಕಾಚಾರವನ್ನು ಭಾರತ ಹಾಕಿಕೊಂಡಿದೆ.
Advertisement
The bilateral strategic energy partnership is a key constituent of our bilateral partnership. The industry is confident of leveraging new energy opportunities: Union Minister @PetroleumMin, @dpradhanbjp at the 2nd Ministerial meeting of the US-India Strategic Energy Partnership pic.twitter.com/r4CQFSZAnA
— NITI Aayog (@NITIAayog) July 17, 2020
Advertisement
ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 714 ದಶಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಭಾರತ 5.33 ದಶಲಕ್ಷ ಟನ್( 38 ದಶಲಕ್ಷ ಬ್ಯಾರೆಲ್) ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಬಳಸಬಹುದು. ಇದನ್ನೂ ಓದಿ: ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು
Today, we're pleased to announce a technical cooperation agreement between U.S. @Energy Department and Indian @PetroleumMin on Strategic Petroleum Reserve, which ensures a consistent energy supply, protects national security, and promotes regional and global stability. #AsiaEdge
— State_SCA (@State_SCA) July 17, 2020
ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.
ಭಾರತ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ರಾಷ್ಟ್ರಗಳಿಂದ ಅಲ್ಲದೇ ಅಮೆರಿಕದಿಂದಲೂ ತೈಲವನ್ನು ಆಮದು ಮಾಡುತ್ತದೆ. ಭಾರತದ 6ನೇ ದೊಡ್ಡ ತೈಲ ಆಮದು ಮಾಡುವ ರಾಷ್ಟ್ರ ಅಮೆರಿಕವಾಗಿದ್ದು, 2017ರಿಂದ ತೈಲ ಖರೀದಿಸಲು ಆರಂಭಿಸಿದೆ. 2017 ಮತ್ತು 2019ರ ನಡುವೆ ಆಮದು 10 ಪಟ್ಟು ಹೆಚ್ಚಾಗಿದೆ. ಪ್ರತಿ ದಿನ 2,50,000 ಬ್ಯಾರೆಲ್ ಕಚ್ಚಾ ತೈಲವನ್ನು ಅಮೆರಿಕ ಭಾರತಕ್ಕೆ ರಫ್ತು ಮಾಡುತ್ತಿದೆ. ಈ ಮೂಲಕ ಅಮೆರಿಕದದಿಂದ ಅತಿ ಹೆಚ್ಚು ತೈಲ ಆಮದು ಮಾಡುತ್ತಿರುವ ದೇಶಗಳ ಪೈಕಿ ಮೊದಲ ಸ್ಥಾನ ಭಾರತಕ್ಕೆ ಸಿಕ್ಕಿದೆ.
ಭಾರತ ಅಮೆರಿಕ ನಡುವಿನ ಇಂಧನ ಸಹಭಾಗಿತ್ವ ಸಭೆ ಈ ವರ್ಷದ ಏಪ್ರಿಲ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ನಿಂದಾಗಿ ಮುಂದೂಡಿಕೆಯಾಗಿದ್ದ ಸಭೆ ಈಗ ನಡೆದಿದೆ.
ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.
ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.
ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.