ಮಡಿಕೇರಿ: ಕೊಡಗಿನ ಆಚಾರ ವಿಚಾರ ಸಂಸ್ಕೃತಿ ಪರಂಪರೆ ಸಂಪ್ರದಾಯ ಕುರಿತು ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿಯೇ ಕೊಡವ ತರುಣ ವೈದ್ಯ ಅಮೆರಿಕದಲ್ಲಿ ಸಲಿಂಗ ವಿವಾಹ ಅಗಿರುವುದು ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೊಡವ ಉಡುಗೆ-ತೊಡುಗೆ ಧರಿಸಿ ಸಲಿಂಗ ವಿವಾಹವಾಗಿರುವುದರಿಂದ ಜಿಲ್ಲೆಯ ಕೊಡವ ಜನಾಂಗದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
Advertisement
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೋಳ್ಳರಿಮಾಡಿನಲ್ಲಿರುವ ಕೊಡವ ಕುಟುಂಬ ಅಧ್ಯಕ್ಷ ಜಯಕುಮಾರ್ ಹಾಗೂ ನಳಿನಿ ದಂಪತಿಯ ಹಿರಿಯ ಪುತ್ರ ಶರತ್ ಪೊನ್ನಪ್ಪ (38) ಮದುವೆಯಾದ ಯುವಕ. ಇವರು ಕಳೆದ ಸೆಪ್ಟೆಂಬರ್ 25 ರಂದು ಉತ್ತರ ಭಾರತದ ಸಿಖ್ ತರುಣ ಸಂದೀಪ್ ದೋಸಾಂಜ್ ನೊಂದಿಗೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ವಿವಾಹವಾಗಿದ್ದಾರೆ.
Advertisement
Advertisement
ಕೊಡವ ಸಂಪ್ರದಾಯದಂತೆ ಮದುವೆ ಅಗಿರುವ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಅಲ್ಲದೆ ಮದುವೆ ಸಮಾರಂಭದಲ್ಲಿ ಕೊಡವ ಉಡುಪಿನಲ್ಲಿ ಪೇಟ, ಪೀಚೆ, ಕತ್ತಿ, ಚ್ಯಾಲೆ ಚಿಕ್ ವಸ್ತ್ರ ಧರಿಸಿ ಮದುವೆ ಅಗಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೊಡಗಿನ ಸಂಸ್ಕೃತಿಗಳನ್ನು ಉಳಿಸಬೇಕಾದ ಇಂದಿನ ಯುವ ಜನಾಂಗ ಎಲ್ಲವನ್ನೂ ಮರೆತಿದ್ದಾರೆ ಎಂದು ಜಿಲ್ಲೆಯ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
Advertisement
ಈ ಬಗೆ ಕೊಡವ ಮುಖಂಡ ದೇವಯ್ಯ ಮಾತಾನಾಡಿ, ಈ ರೀತಿಯಲ್ಲಿ ಮದುವೆ ಆಗಿರುವುದು ಹೆಚ್ಚು ದಿನ ಬಾಳುವುದಕ್ಕೆ ಅಲ್ಲ. ಪ್ರಕೃತಿ ವಿರೋಧವಾಗಿ ವಿವಾಹ ಅಗಿದ್ದಾರೆ. ದೂರದ ರಾಷ್ಟ್ರಗಳಲ್ಲಿ ಈ ರೀತಿಯ ಮದುವೆಗಳು ನಡೆಯಬಹುದು. ಅದರೆ ಭಾರತ ದೇಶದಲ್ಲಿ ಒಂದು ಸಮುದಾಯಕ್ಕೆ ಒಂದು ಸಂಸ್ಕೃತಿ ಅಂತ ಇದೆ. ಕೊಡವ ಸಂಪ್ರದಾಯಕ್ಕೆ ಅದರದ್ದೇ ಆದ ಸಂಸ್ಕೃತಿ ಅಚಾರ-ವಿಚಾರ ಪದ್ಧತಿ-ಪರಂಪರೆಗಳು ಇದೆ. ಈ ಸಂಸ್ಕೃತಿಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ಪಡುವಾಗ ಈ ರೀತಿಯಲ್ಲಿ ಮಾಡಿರುವುದು ಸರಿಯಲ್ಲ. ಇವರಿಗೆ ಯಾರೂ ಕ್ಷಮೆ ನೀಡಬಾರದು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.