ಮಡಿಕೇರಿ: ಅಮೆರಿಕದಲ್ಲಿ ನೆಲೆಸಿರುವ ಮೂಲತಃ ಮಂಡ್ಯ ಜಿಲ್ಲೆಯ ಹಳ್ಳಿಗೆರೆಯವರಾದ ನರಸಿಂಹಮೂರ್ತಿ ಹಾಗೂ ಪುತ್ರ ವಿವೇಕ್ ಮೂರ್ತಿ ಅವರು ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನೀಡಿದ್ದಾರೆ.
Advertisement
ಕೋವಿಡ್ ಬೇಗೆಯಲ್ಲಿ ಭಾರತ ಬೇಯುತ್ತಿರುವಾಗ ಹುಟ್ಟೂರಿಗೆ ನೆರವಾಗುವ ದೃಷ್ಟಿಯಿಂದ ನರಸಿಂಹ ಮೂರ್ತಿ ಅವರು, ಮಂಡ್ಯ ಜಿಲ್ಲೆಯ ಹಾಗೂ ಕೊಡಗು ಜಿಲ್ಲೆಗೆ ಸಹಕಾರ ನೀಡುವ ಮೂಲಕ ತಾಯ್ನಾಡಿನ ಸಂಕಷ್ಟಕ್ಕೆ ನೆರವಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ನರಸಿಂಹಮೂರ್ತಿ, ವಿವೇಕ್ ಮೂರ್ತಿ ಅವರ ಸ್ಕೋಪ್ ಸಂಸ್ಥೆಯ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ 2.40 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬಡ ಜನರ ಸೇವೆಗೆ ಮುಂದಾಗಿರುವ ನರಸಿಂಹಮೂರ್ತಿ, ವಿವೇಕ್ ಮೂರ್ತಿ ಅವರ ಸ್ಕೋಪ್ ಸಂಸ್ಥೆಯ ಕಡೆಯಿಂದ ಜಿಲ್ಲೆಗೆ ಉಪಕರಣಗಳನ್ನು ನೀಡಿದ್ದು, ಇನ್ನಷ್ಟು ಸಹಕಾರ ನೀಡುವುದಾಗಿ ನರಸಿಂಹಮೂರ್ತಿ ಹೇಳಿದ್ದಾರೆ.
Advertisement
Advertisement
ಅಮೆರಿಕದ ಆರೋಗ್ಯ ಸಚಿವಾಲಯದಲ್ಲಿ ಪ್ರಮುಖ ಹುದ್ದೆ ಹೊಂದಿರುವ ಭಾರತೀಯ ಸಂಜಾತ ವಿವೇಕ್ ಮೂರ್ತಿ, ನರಸಿಂಹ ಮೂರ್ತಿ ಅವರ ಪುತ್ರರಾಗಿದ್ದಾರೆ. ಅಮೆರಿಕದಲ್ಲಿ ಬರಾಕ್ ಒಬಾಮಾ ಸರ್ಕಾರ ಇದ್ದಾಗಲೇ ವಿವೇಕ್ ಮೂರ್ತಿ ಅವರನ್ನು ಈ ಹುದ್ದೆಗೆ ನೇಮಿಸಿದ್ದು, ವಿವೇಕ್ ವೃತ್ತಿ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದ್ದ ಬೈಡೆನ್ ಕೂಡ ವಿವೇಕ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸಿದ್ದಾರೆ. ತಮ್ಮ ಸ್ಕೋಪ್ ಸಂಸ್ಥೆ ಮೂಲಕ ಇದೀಗ ಭಾರತದ ಕೆಲವು ಸಣ್ಣ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿರುವ ವಿವೇಕ್ ಮೂರ್ತಿ, ಮಡಿಕೇರಿ ಕೋವಿಡ್ ಆಸ್ಪತ್ರೆ ಸೇರಿದಂತೆ ರಾಜ್ಯದ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Advertisement
ಈ ಆಸ್ಪತ್ರೆಗಳಿಗೆ 70 ಆಕ್ಸಿಜನ್ ಉಪಕರಣ, 4 ವೆಂಟಿಲೇಟರ್, ಅತ್ಯುತ್ತಮ ಗುಣಮಟ್ಟದ ಮಾಸ್ಕ್, ವೈದ್ಯಕೀಯ ಉಪಕರಣಗಳನ್ನು ನೀಡಲಿದ್ದಾರೆ. 12 ಆಸ್ಪತ್ರೆಗಳಿಗೆ ಸ್ಕೋಪ್ ಫೌಂಡೇಶನ್ ವಿನಿಯೋಗಿಸಲಿರುವ ಮೊತ್ತವೇ 2.40 ಕೋಟಿ ರೂ. ಗಳಾಗಿದ್ದು, ಇಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಹಸಿರು ಕ್ರಾಂತಿಯಾಗಲು ಕೊಡಗಿನ ಕಾವೇರಿ ಮಾತೆ ಸೇವೆ ಅಪಾರ ಎಂದು ತಿಳಿಸಿದ ಅವರು, ಕೊಡಗು ಹಾಗೂ ತಮಗೂ ಅಪಾರವಾದ ನಂಟಿದೆ ಜಿಲ್ಲೆಗೆ ಸೇವೆ ಮಾಡಲು ಖುಷಿಯಾಗುತ್ತದೆ ಎಂದು ವೀಡಿಯೋ ಹೇಳಿಕೆ ಮೂಲಕ ತಿಳಿಸಿದ್ದಾರೆ.