ವಾಷಿಂಗ್ಟನ್ : ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಜೊತೆ ಬಾಹ್ಯಾಕಾಶಕ್ಕೆ ಹೋಗಲು 28 ದಶಲಕ್ಷ ಡಾಲರ್(ಅಂದಾಜು 204 ಕೋಟಿ ರೂ.)ನೀಡಿ ಬಿಡ್ ಗೆದ್ದು ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ.
Advertisement
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಂಸ್ಥಾಪಿಸಿರುವ ಬ್ಲ್ಯೂ ಒರಿಜಿನ್ ಕಂಪನಿಯ ಚೊಚ್ಚಲ ಬಾಹ್ಯಾಕಾಶ ಪ್ರವಾಸ ಯೋಜನೆಯ ಟಿಕೆಟ್‍ಗೆ ಬುಕ್ಕಿಂಗ್ ಆರಂಭವಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ 204 ಕೋಟಿ ರೂಪಾಯಿ ಬಿಡ್ ಮಾಡಿ ಗೆದ್ದುಕೊಂಡಿದ್ದಾರೆ.
Advertisement
Advertisement
ಅಮೆರಿಕಾ ಗಗನಯಾತ್ರಿಗಳಾದ ನೀಲ್ ಅರ್ಮ್‍ಸ್ಟ್ರಾಂಗ್ ಚಂದ್ರನ ಮೇಲಿಳಿದು ಇದೇ ಜು.20ಕ್ಕೆ 52 ವರ್ಷ ತುಂಬಲಿದೆ. ಅದೇ ದಿನ ಬ್ಲ್ಯೂ ಒರಿಜಿನ್ ಕಂಪನಿಯ ರಾಕೆಟ್ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲಿದೆ.
Advertisement
ಮೊದಲ ಪ್ರಯಾಣದಲ್ಲಿ ಬೆಜೋಸ್ ಮತ್ತು ಅವರ ಸಹೋದರ ಮಾರ್ಕ್ ಇರಲಿದ್ದು, ಇನ್ನೊಂದು ಸೀಟ್‍ಗೆ ಆಸಕ್ತರಿಗಾಗಿ ಬಿಡ್ ಆಹ್ವಾನಿಸಲಾಗಿತ್ತು. 159 ದೇಶಗಳ 7500 ಜನ ಭಾಗಿಯಾಗಿದ್ದರು. ಈ ಪೈಕಿ ಅತಿ ಹೆಚ್ಚು ಅಂದರೆ 204 ಕೋಟಿ ರೂಪಾಯಿ ಬಿಡ್ ಸಲ್ಲಿಸಿದ ವ್ಯಕ್ತಿಯನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಬಿಡ್ ಗೆದ್ದ ವ್ಯಕ್ತಿ ಯಾರು ಎಂಬುದನ್ನು ಕಂಪನಿ ಬಹಿರಂಗ ಮಾಡಿಲ್ಲ.