ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಗೆ ಕೊರೊನಾ ಬಂದಿರುವುದು ದೃಢಪಟ್ಟಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ನಟಿ ರಾಖಿ ಸಾವಂತ್ ಕೊಟ್ಟ ಪ್ರತಿಕ್ರಿಯೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು. ಅಮೀರ್ ಖಾನ್ ಕೊರೊನಾ ಬಂದಿದೆ ಅಂತ ತನ್ನ ಕಿವಿಗೆ ಬೀಳ್ತಿದ್ದಂತೆಯೇ ಅಚ್ಚರಿಗೊಳಗಾದ ರಾಖಿ, ಅಮೀರ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ಏನಿದೆ..?
ಡಾರ್ಕ್ ಪಿಂಕ್ ಜಿಮ್ ಡ್ರೆಸ್ ಹಾಕಿಕೊಂಡಿರುವ ರಾಖಿ ಕಾರು ಹತ್ತಲು ಮುಂದಾಗುತ್ತಾರೆ. ಈ ವೇಳೆ ಫೋಟೋಗ್ರಾಫರ್ ಒಬ್ಬರು ಅಮೀರ್ ಖಾನ್ ಗೆ ಕೊರೊನಾ ಬಂದಿರುವುದಾಗಿ ಮಾಹಿತಿ ನೀಡುತ್ತಾರೆ. ಈ ವೇಳೆ ಸೆನ್ ತಿರುಗಿದ ರಾಖಿ, ಓ ವೈ ಗಾಡ್ ಎಂದು ಆಘಾತಗೊಂಡರು. ಅಲ್ಲದೆ ಇದರಿಂದ ನನಗೆ ಭಯವಾಗ್ತಿದೆ. ಅಮೀರ್ ಜಿ ಐ ಲವ್ ಯೂ, ಮಿಸ್ ಯೂ ಅಂತೆಲ್ಲ ಆತಂಕದಿಂದಲೇ ಹೇಳಿದ್ದಾರೆ.
ಈ ವೀಡಿಯೋವನ್ನು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಕೆಲವರು ರಾಖಿ ಮಾತಿಗೆ ತಮಾಷೆ ಮಾಡಿದರೆ, ಇನ್ನೂ ಕೆಲವರು ನೌಟಂಕಿ ಅಂತ ಹೇಳಿದ್ದಾರೆ. ಇನ್ನೂ ಕೆಲವರು ರಾಖಿ ಒಳ್ಳೆಯ ಮನಸ್ಸನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ.
View this post on Instagram