ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್ ಡೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಇದು ತನಗೆ ಸಿಕ್ಕ ಹುಟ್ಟುಹಬ್ಬದ ಉಡುಗೊರೆ ಎಂದು ಹೇಳಿಕೊಂಡಿದ್ದರು. ಈಗ ತಾವು ನಟಿಸುತ್ತಿರುವ ಸಿನಿಮಾ ಸೆಟ್ನಲ್ಲೇ ರಶ್ಮಿಕಾ ಅಮಿತಾಭ್ ಅವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ನಿರ್ದೇಶಕ ವಿಕಾಸ್ ಬಹಲ್ ಜೊತೆ ಕ್ರೇಜಿ ಪೋಸ್ ನೀಡಿದ್ದಾರೆ. ಖುಷಿಯಿಂದ ಅಮಿತಾಭ್ ಅವರೊಂದಿಗೆ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ಖಾತೆಯಲ್ಲಿ ಹಂಚಿಕೊಂಡು ಫೋಟೋಗಾಗಿ ಮಾಸ್ಕ್ ತೆಗೆದಿದ್ದೇವೆ. ಇದು ನಿಜಕ್ಕೂ ತೃಪ್ತಿ ತಂದ ದಿನ ಎಂದು ಬರೆದುಕೊಂಡಿದ್ದಾರೆ.
View this post on Instagram
ಸಿನಿಮಾ ತಾರೆಯರು, ಸೆಲೆಬ್ರೆಟಿಗಳು, ಅಭಿಮಾನಿಗಳು, ನಿರ್ದೇಶಕರು ರಶ್ಮಿಕಾ ಅವರು ಹುಟ್ಟು ಹಬ್ಬಕ್ಕೆ ಕಾಮನ್ ಡಿಪಿ ಶೇರ್ ಮಾಡುವ ಮೂಲಕವಾಗಿ ವಿಶ್ ಮಾಡಿದ್ದರು. ನಿನ್ನೆಯಷ್ಟೆ 25ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಶ್ಮಿಕಾ ಮಂದಣ್ಣ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ನಿಜ. ಆದರೆ ಬಿಗ್ ಸ್ಟಾರ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಗುಡ್ ಬೈ ಸಿನಿಮಾ ಸೆಟ್ನಲ್ಲೇ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.
ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸಂಭ್ರಮವನ್ನು ಬಾಲಿವುಡ್ ಸ್ಟಾರ್ ನಟರೊಂದಿಗೆ ಸರಳವಾಗಿ ಆಚರಿಸಿಕೊಳ್ಳುವ ಮೂಲಕವಾಗಿ ಸಖತ್ ಸುದ್ದಿಯಾಗಿದ್ದಾರೆ. ಕನ್ನಡದ ಬೆಡಗಿ ಬಾಲಿವುಡ್ ಅಂಗಳದಲ್ಲಿ ತನ್ನದೇ ಆಗಿರುವ ನಟನಾ ಶೈಲಿಯ ಮೂಲಕವಾಗಿ ಹೆಸರು ಮಾಡುತ್ತಿದ್ದಾರೆ.