– ಲೆಜೆಂಡ್ ಸ್ಪಿನ್ನರ್‌ಗೆ ಮುಳುವಾಯ್ತು 2009ರ ಹೇಳಿಕೆ
– 2009ರ ಮೇಯಲ್ಲಿ ಎಲ್‍ಟಿಟಿಇ ಧ್ವಂಸ
ಚೆನ್ನೈ: ಅಮಾಯಕರ ಕೊಲ್ಲುವುದನ್ನು ನಾನು ಎಂದೂ ಬೆಂಬಲಿಸಿಲ್ಲ ಎಂದು ಶ್ರೀಲಂಕಾ ತಂಡದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಹೇಳಿದ್ದಾರೆ.
ಸದ್ಯ ತಮಿಳುನಾಡಿನಲ್ಲಿ ಒಂದು ವಿವಾದ ಸಖತ್ ಸದ್ದು ಮಾಡುತ್ತಿದೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ‘800’ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿರುವುದಕ್ಕೆ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುತ್ತಯ್ಯ 2009ರಲ್ಲಿ ತಮಿಳಿಗರ ವಿರುದ್ಧ ಹೇಳಿಕೆ ನೀಡಿದ್ದು, ಈ ಕಾರಣದಿಂದ ಅವರ ಸಿನಿಮಾದಲ್ಲಿ ವಿಜಯ್ ನಟಿಸಬಾರದು ಎಂದು ಹೇಳಲಾಗುತ್ತಿದೆ.
Advertisement
Advertisement
2009ರ ಮೇನಲ್ಲಿ ಶ್ರೀಲಂಕಾದ ಸೇನೆ ಈಶಾನ್ಯ ಶ್ರೀಲಂಕಾದಲ್ಲಿ ವಾಸವಿದ್ದ ಅನೇಕ ಮಂದಿ ತಮಿಳಿಗರನ್ನು ಹೊಡೆದು ಹಾಕಿತ್ತು. ಅಂದು ಮುತ್ತಯ್ಯ ಮುರಳೀಧರನ್, ಇಂದು ನನಗೆ ಅತ್ಯಂತ ಸಂತೋಷದ ದಿನ ಎಂದು ಹೇಳಿದ್ದರು. ಈಗ ಈ ಕಾರಣಕ್ಕೆ ತಮಿಳುನಾಡಿನ ಕೆಲ ಚಿತ್ರ ಪ್ರೇಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ತಮಿಳಿಗರು ಸತ್ತ ದಿನವನ್ನು ಸಂತೋಷದ ದಿನ ಎಂದಿದ್ದ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳಿನ ನಟ ಅಭಿನಯಿಸುವುದು ಬೇಡ ಎಂದು ಒತ್ತಾಯಿಸುತ್ತಿದ್ದಾರೆ.
Advertisement
Advertisement
ಈಗ ಇದೇ ವಿಚಾರವಾಗಿ ಹೇಳಿಕೆ ನೀಡಿರುವ ಮುತ್ತಯ್ಯ ಮುರಳೀಧರನ್, ಅಂದು ನಾನು ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ಅಂದು ನಾನು ಅಮಾಯಕರು ಸತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿರಲಿಲ್ಲ. ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಯುದ್ಧ, ಘರ್ಷಣೆ ಇಲ್ಲಿಗೆ ಕೊನೆಯಾಗಿದೆ. ಅದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದೆ. ನಾನು ಎಂದು ಅಮಾಯಕರ ಕೊಲ್ಲುವುದನ್ನು ಬೆಂಬಲಿಸಿಲ್ಲ ಎಂದು ಮುತ್ತಯ್ಯ ತಿಳಿಸಿದ್ದಾರೆ.
ನಾನು ನನ್ನ ಬಯೋಪಿಕ್ ಮಾಡಲು ಏಕೆ ಒಪ್ಪಿಗೆ ಸೂಚಿಸಿದ್ದೇನೆ ಎಂದರೆ, ನನ್ನ ಕಥೆ ಇನ್ನೊಬ್ಬರಿಗೆ ಸ್ಫೂತಿಯಾಗಲಿ. ನನ್ನ ಈ ಮಟ್ಟಕ್ಕೆ ತರಲು ಕಷ್ಟಪಟ್ಟ ನನ್ನ ತಾಯಿ ನನ್ನ ಕುಟುಂಬ ಮತ್ತು ಸ್ನೇಹಿತರ ಕಷ್ಟ ಎಲ್ಲರಿಗೂ ಅರ್ಥವಾಗಲಿ ಎಂದು ಬಯೋಪಿಕ್ ಮಾಡಲು ಒಪ್ಪಿದ್ದೇನೆ. ನಾನು 30 ವರ್ಷ ಯದ್ಧದ ಮಧ್ಯದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷ ಇರುವಾಗಲೇ ನನ್ನ ತಂದೆ ತೀರಿಕೊಂಡರು. ಬಹಳ ದಿನ ನಾವು ಬೀದಿಯಲ್ಲಿ ಬದುಕಿದ್ದೇವೆ ಎಂದು ಹೇಳಿದ್ದಾರೆ.
2009ರ ಮೇ – ಎಲ್‍ಟಿಟಿಇ ಧ್ವಂಸ
ಈಶಾನ್ಯ ಶ್ರೀಲಂಕಾದಲ್ಲಿ ಹಿಂದೂ ತಮಿಳರಿಗೆ ಸ್ವತಂತ್ರ ಭೂಮಿ ಬೇಕು ಎಂದು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‍ಟಿಟಿಇ) ಎಂಬ ಪ್ರತ್ಯೇಕತಾವಾದಿ ಗುಂಪೊಂದು ಹುಟ್ಟಿಕೊಂಡಿತ್ತು. 1970ರಲ್ಲಿ ವೇಲುಪಿಳ್ಳೈ ಪ್ರಭಾಕರನ್ ಇದನ್ನು ಸ್ಥಾಪಿಸಿ ಪ್ರತ್ಯೇಕ ಭೂಮಿಗಾಗಿ ಹೋರಾಟ ಮಾಡುತ್ತಿದ್ದರು. ಆದರೆ 2009ರ ಮೇನಲ್ಲಿ ಶ್ರೀಲಂಕಾದ ಸಶಸ್ತ್ರ ಪಡೆಗಳು ಅವರ ಮೇಲೆ ದಾಳಿ ಮಾಡಿದ್ದರು. ಅಂದು ಲಕ್ಷಾಂತರ ತಮಿಳಿಗರು ಅಸುನೀಗಿದ್ದರು.