ಅಭಿವೃದ್ದಿಗೆ ಮೋದಿ, ಬಿಎಸ್‍ವೈ ಡಬಲ್ ಎಂಜಿನ್ – ಅಮಿತ್ ಶಾ

Public TV
3 Min Read
AMITH SHA 1 1

– ತಾ.ಪಂ. ಚುನಾವಣೆಯಲ್ಲಿ ಶೇ.75 ಸ್ಥಾನ ಗೆಲ್ಲಬೇಕು
– ಕಟೀಲ್, ಸಿಎಂ ಕೆಲಸಕ್ಕೆ ಶ್ಲಾಘನೆ

ಬೆಳಗಾವಿ: ಸಿಎಂ ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಶ್ರಮ ಮತ್ತು ಒಗ್ಗಟ್ಟಿನಿಂದ ಗ್ರಾಪಂ ಚುನಾವಣೆಯಲ್ಲಿ ಪ್ರತಿಶತ ಶೇ.60 ರಷ್ಟರಲ್ಲಿ ನಾವು ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಬರಲಿರುವ ತಾಪಂ. ಜಿಪಂ ಚುನಾವಣೆಯಲ್ಲಿ ಶೇ.75ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಅಮಿತ್ ಶಾ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

AMITH SHA.2 1

 

ಬೆಳಗಾವಿಯ ನೆಹರು ನಗರದ ಜಿಲ್ಲಾ ಕ್ರೀಡಾಂಗಣಲ್ಲಿ ಬಿಜೆಪಿಯ ಜನಸೇವಕ ಸಮಾವೇಶ ಉದ್ದೇಶಿಸಿ ಮಾತಾನಾಡಿದ ಅವರು, ಮೋದಿ ಹಾಗೂ ಯಡಿಯೂರಪ್ಪ ಡಬಲ್ ಇಂಜಿನ ತರಹ ಕೆಲಸ ಮಾಡಿ ರಾಜ್ಯಕ್ಕೆ ಅನುದಾನ ನೀಡಿದ್ದಾರೆ. ಕೊರೊನಾ ಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಸಿಎಂ ಬಿಎಸ್ ವೈ ಆಟೋ ಚಾಲಕರಿಗೆ, ರೈತರಿಗೆ ಸಹಾಯ ಧನ ನೀಡಿ ನೆರವಿಗೆ ಬಂದಿದ್ದಾರೆ. ಕಾಂಗ್ರೆಸ್‍ನವರು ಕೇಂದ್ರದಲ್ಲಿ ನಿಮ್ಮದೆ ಸರ್ಕಾರ 10 ವರ್ಷ ಇದ್ದಾಗ ಕರ್ನಾಟಕಕ್ಕೆ ಏನೂ ನೀಡಿದ್ದೀರಿ? ರಾಜ್ಯಕ್ಕೆ ನೀಡಿದ ಅನುದಾನದ ಪಟ್ಟಿ ಕೋಡಿ ಎಂದು ಆಗ್ರಹಿಸಿದರು.

ಗ್ರಾಪಂ ಸದಸ್ಯರನ್ನು ಅಭಿನಂದಿಸಲು ನಾನು ದೆಹಲಿಯಿಂದ ಬೆಳಗಾವಿಗೆ ಬಂದಿದ್ದೇನೆ. ಬೆಳಗಾವಿ ಜನರಿಗೆ ಮಕರ ಸಂಕ್ರಮಣದ ಶುಭಾಶಯಗಳು. ಸಂಕ್ರಮಣದಿಂದ ಎಲ್ಲರಿಗೂ ಉನ್ನತಿ ಸನ್ಮಾನ ಸಿಗಲಿ ಎಂದು ಹಾರೈಸಿದರು.

AMITH SHA.3

ವಿಧಾನಸಭೆ ಚುನಾವಣೆಯಲ್ಲೂ ನೀವೂ ಮತ ನೀಡಿ ನಮ್ಮನ್ನು ಗೆಲ್ಲಿಸಿದ್ದೀರಿ. ವಿರೋಧ ಪಕ್ಷದವರು ವಿರೋಧಿಸಿದ್ದರೂ ಕೆಲವೇ ತಿಂಗಳಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ. 2014ರ ತನಕ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ದೇಶದ ಸುರಕ್ಷತೆ ಯಾವ ರೀತಿ ಇತ್ತು ಎಂದು ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದರು.

70 ವರ್ಷಗಳಿಂದ ಜೀವಂತವಾಗಿದ್ದ ಸಮಸ್ಯೆಗಳನ್ನು ಯಾರು ಸರಿಮಾಡಿರಲಿಲ್ಲ. ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಸಮಸ್ಯೆ ಬಗೆಹರಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಆದರೆ ಮೋದಿ ಸರ್ಕಾರ ಬಂದ ನಂತರ ಕಾಶ್ಮೀರ ಈಗ ಭಾರತದ ಅಂಗವಾಗಿದೆ. ಕಾಶ್ಮೀರವನ್ನು ನೆಹರು ಅವರಿಂದ ಮನಮೋಹನ ಸಿಂಗ್ ಅವರ ವರೆಗೆ ಯಾರು ಮುಟ್ಟುವ ಪ್ರಯತ್ನ ಮಾಡಿರಲಿಲ್ಲ ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

AMITH SHA.1 1

ಬೆಳವಾಡಿ ಮಲ್ಲಮ್ಮರನ್ನು ಸ್ಮರಿಸಿ ಮಲ್ಲಮ್ಮರ ಸಾಹಸ ಕೊಂಡಾಡಿದ ಶಾ, ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮರನ್ನು ಮರೆಯಲು ಸಾಧ್ಯವಿಲ್ಲ ಹಾಗೆ ನಮ್ಮ ಮಿತ್ರ ಸುರೇಶ ಅಂಗಡಿಯರನ್ನು ಮರೆಯಲು ಆಗುತ್ತಿಲ್ಲ. ಅವರ ನಗುಮುಖದ ಮುಖ ಮತ್ತೆ ಮತ್ತೆ ಕಾಡುತ್ತಿದೆ. ಅವರ ಮನೆಗೆ ಹೋಗಿ ಸ್ವಾಂತನ ಹೇಳಿ ಬಂದಿದ್ದೇವೆ ಎಂದರು.

AMITH SHA.4 1

ಮುಂಬೈ ಕರ್ನಾಟಕ ಕನ್ನಡಿಗರು ಮತ್ತು ಮರಾಠಿಗರ ಬಾಂಧವ್ಯ ಭಾರತದ ಏಕತೆಯನ್ನ ತೋರಿಸುತ್ತದೆ. ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪನವರ ಶ್ರಮ ಮತ್ತು ಒಗ್ಗಟ್ಟಿನಿಂದ ಗ್ರಾಪಂ ಚುನಾವಣೆಯಲ್ಲಿ ಪ್ರತಿಶತ 60% ರಷ್ಟು ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ವಿಧಾನಸಭೆ ಚುನಾವಣೆಯಲ್ಲೂ ನೀವೂ ಮತ ನೀಡಿ ನಮ್ಮನ್ನು ಗೆಲ್ಲಿಸಿದ್ದೀರಿ. ವಿರೋಧ ಪಕ್ಷದವರು ವಿರೋಧಿಸಿದ್ದರೂ ಕೆಲವೇ ತಿಂಗಳಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ. 2014ರ ತನಕ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ದೇಶದ ಸುರಕ್ಷತೆ ಯಾವ ರೀತಿ ಇತ್ತು ಎಂದು ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದರು.

2014 ರಿಂದ 2019 ರವರೆಗೆ ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿತು. ಆ ಸಂದರ್ಭ ಪಾಕಿಸ್ತಾನ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಭಾವಿಸಿತ್ತು. ಆದರೆ ಆ ವೇಳೆ ಬಿಜೆಪಿ ಸರ್ಕಾರ ಬಂದಿತ್ತು. ನಾವು ಪಾಕಿಸ್ತಾನದ ಮನೆಗಳಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರತ್ಯುತ್ತರ ನೀಡಿದ್ದೇವೆ. ಮನೆ ಮನೆಗಳಿಗೆ ವಿದ್ಯುತ್, ನಿರಾಶ್ರಿತರಿಗೆ ಸೂರು ಕೊಡುವ ಯೋಜನೆಯನ್ನ ಮೋದಿ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರ ಮನೆಗೆ ಗ್ಯಾಸ್ ಮತ್ತು ವಿದ್ಯುತ್ ಯಾಕೆ ಸಿಗಲಿಲ್ಲ ಎಂದರೆ ಕಾಂಗ್ರೆಸ್‍ಗೆ ಗರೀಬ್ ಹಟಾವೋ ಬೇಕಿರಲಿಲ್ಲ. ಅವರಿಗೆ ಗರೀಬ್‍ರನ್ನು ಹಟಾವೋ ಮಾಡಬೇಕಾಗಿತ್ತು ಎಂದು ಕಾಂಗ್ರೆಸ್‍ನ್ನು ಮಾತಿನ ಮೂಲಕ ವ್ಯಂಗ್ಯವಾಡಿದರು.

ಆತ್ಮನಿರ್ಭರ ಯೋಜನೆ ಮೂಲಕ ಮೋದಿಯವರು ಸ್ವದೇಶಿ ವಸ್ತುಗಳಿಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೂ ಬ್ರಾಂಡ್ ಬ್ಯಾಂಡ್ ಸೇವೆ ಒದಗಲಿದೆ. ಮೋದಿಯವರೊಂದಿಗೆ ನಾವು ಸರ್ಮರ್ಥವಾಗಿ ಕೊರೊನಾ ಸಂಕ್ರಾಮಿಕ ರೋಗವನ್ನು ನಿಭಾಯಿಸಿದ್ದೇವೆ. ಲಸಿಕೆಯ ಬಗ್ಗೆಯೂ ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ತಯಾರಾದ 2 ಲಸಿಕೆಗಳು ಸುರಕ್ಷಿತವಾಗಿವೆ ಎಲ್ಲರೂ ಶಿಸ್ತುಬದ್ಧವಾಗಿ ಲಸಿಕೆ ಪಡೆಯಿರಿ. ಕೊರೊನಾದಿಂದ ದೇಶ ಮುಕ್ತವಾಗಲಿ ಎಂದು ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *