ಚಾಮರಾಜನಗರ: ಅಭಿಮಾನಿಯೊಬ್ಬರ ಹುಟ್ಟುಹಬ್ಬಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡು ಹೇಳಿ ಶುಭಕೋರಿದ್ದಾರೆ.
ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ಮಂಜು ರಾಜ್ ಕುಟುಂಬದ ದೊಡ್ಡ ಅಭಿಮಾನಿ. ಹಾಗೆ ರಾಜರತ್ನ ಅಪ್ಪು ಯುವ ಸೇನಾ ಸಮಿತಿಯ ಅಧ್ಯಕ್ಷರು ಆಗಿದ್ದಾರೆ. ಮಂಜು ಅವರ ಹುಟ್ಟು ಹಬ್ಬದ ಹಿನ್ನೆಲೆ ಪುನೀತ್ ರಾಜ್‍ಕುಮಾರ್ ವಿಡಿಯೋ ಸಂದೇಶ ರವಾನಿಸಿದ್ದಾರೆ.
ವಿಡಿಯೋದಲ್ಲಿ ನಗು ನಗುತಾ ಬಾಳು ನೀನು ನೂರು ವರ್ಷ ಹಾಡು ಹೇಳಿರುವ ಯುವರತ್ನ, ಹುಟ್ಟುಹಬ್ಬದ ಶುಭಾಶಯಗಳು ಮಂಜು. ನಿಮ್ಮ ಜೀವನದಲ್ಲಿ ಸಂತೋಷ ತುಂಬಿರಲಿ. ದೇವರು ನಿಮಗೆ ಆರೋಗ್ಯ ಮತ್ತು ಸಂತೋಷ ನೀಡಲಿ ಎಂದು ಹಾರೈಸಿದ್ದಾರೆ.
ಇನ್ನು ಪುನೀತ್ ರಾಜ್‍ಕುಮಾರ್ ಅಭಿಮಾನಿಗೆ ವಿಶ್ ಮಾಡುತ್ತಿದ್ದಂತೆ ನಿರ್ದೇಶಕ ಪವನ್ ಒಡೆಯರ್, ಭಜರಂಗಿ ಹರ್ಷ, ರಾಮಚಾರಿ ನಿರ್ದೇಶಕ ಸಂತೋಷ್ ರಾಮ್, ಚೇತನ್ ಕುಮಾರ್ ಶುಭಾಶಯ ತಿಳಿಸಿದ್ದಾರೆ. ಸ್ಯಾಂಡಲ್‍ವುಡ್ ತಾರೆಯರ ಶುಭಾಶಯಕ್ಕೆ ಗಡಿ ಜಿಲ್ಲೆಯ ರಾಜ್ ಕುಟುಂಬದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಪ್ಪು ಬರ್ತ್ ಡೇ ವಿಶ್ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.