ಬೆಂಗಳೂರು: ಗುಂಡ್ಲುಪೇಟೆಯ ಬೊಮ್ಮಲಾಪುರದ ರವಿ ಆತ್ಮಹತ್ಯೆಗೆ ಶರಣಾದ ಸುದ್ದಿ ದಿಗ್ಭ್ರಮೆ ತರಿಸಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಂದೆ ಯಡಿಯೂರಪ್ಪನವರ ಬಗ್ಗೆ ಇಡೀ ರಾಜ್ಯದ ಜನತೆ ಇಟ್ಟಿರುವ ಪ್ರೀತ್ಯಾದಾರಗಳನ್ನು ನಮ್ಮ ಕುಟುಂಬ ಋಣಿಯಾಗಿ ಸ್ಮರಿಸುತ್ತದೆ ಎಂದು ತಿಳಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನನಾಯಕ, ಮುಖ್ಯಮಂತ್ರಿ @BSYBJP ರವರ ರಾಜೀನಾಮೆಯಿಂದ ಮನನೊಂದು ಗುಂಡ್ಲುಪೇಟೆಯ ಬೊಮ್ಮಲಾಪುರದ ರವಿ ಆತ್ಮಹತ್ಯೆಗೆ ಶರಣಾದ ಸುದ್ದಿ ದಿಗ್ಬ್ರಮೆ ತರಿಸಿದೆ. ಪೂಜ್ಯ ತಂದೆ ಯಡಿಯೂರಪ್ಪನವರ ಬಗ್ಗೆ ಇಡೀ ರಾಜ್ಯದ ಜನತೆ ಇಟ್ಟಿರುವ ಪ್ರೀತ್ಯಾದಾರಗಳನ್ನು ನಮ್ಮ ಕುಟುಂಬ ಋಣಿಯಾಗಿ ಸ್ಮರಿಸುತ್ತದೆ. (1/3) pic.twitter.com/QLtzWpnT6Z
— Vijayendra Yeddyurappa (@BYVijayendra) July 27, 2021
ಟ್ವೀಟ್‍ನಲ್ಲಿ ಏನಿದೆ?
ಜನನಾಯಕ, ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜೀನಾಮೆಯಿಂದ ಮನನೊಂದು ಗುಂಡ್ಲುಪೇಟೆಯ ಬೊಮ್ಮಲಾಪುರದ ರವಿ ಆತ್ಮಹತ್ಯೆಗೆ ಶರಣಾದ ಸುದ್ದಿ ದಿಗ್ಬ್ರಮೆ ತರಿಸಿದೆ. ಪೂಜ್ಯ ತಂದೆ ಯಡಿಯೂರಪ್ಪನವರ ಬಗ್ಗೆ ಇಡೀ ರಾಜ್ಯದ ಜನತೆ ಇಟ್ಟಿರುವ ಪ್ರೀತ್ಯಾದಾರಗಳನ್ನು ನಮ್ಮ ಕುಟುಂಬ ಋಣಿಯಾಗಿ ಸ್ಮರಿಸುತ್ತದೆ. ಇದನ್ನೂ ಓದಿ : ಬಿಎಸ್‍ವೈ ರಾಜೀನಾಮೆ – ನೇಣಿಗೆ ಶರಣಾದ ಅಭಿಮಾನಿ
ಅಭಿಮಾನಿಗಳ ಹೃದಯದ ವೇದನೆಯ ಆಳ ನಮಗೆ ಅರ್ಥವಾಗುತ್ತದೆ. ಆದರೆ ದುಡುಕಿನ ನಿರ್ಧಾರಗಳು, ವರ್ತನೆಗಳು
ಮಾನ್ಯ ಯಡಿಯೂರಪ್ಪನವರ ವ್ಯಕ್ತಿತ್ವ ಹಾಗೂ ಮನಸ್ಸಿಗೆ ಘಾಸಿಯುಂಟುಮಾಡದಂತಿರಲಿ ಎಂದು ಕಳಕಳಿಯಿಂದ ವಿನಂತಿಸುವೆ.???? (3/3)
— Vijayendra Yeddyurappa (@BYVijayendra) July 27, 2021
ಅಭಿಮಾನದ ಹೆಸರಲ್ಲಿ ಜೀವ ಕಳೆದುಕೊಂಡಿದ್ದು ಅತೀವ ಯಾತನೆಯನ್ನುಂಟು ಮಾಡಿದೆ. ರವಿ ಕುಟುಂಬದ ನೋವು, ನಷ್ಟವನ್ನು ನಮ್ಮದೇ ಕುಟುಂಬದ್ದೆಂದು ಭಾವಿಸಿದ್ದೇವೆ. ರವಿ ಆತ್ಮಕ್ಕೆ ಸದ್ಗತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ.
ಅಭಿಮಾನಿಗಳ ಹೃದಯದ ವೇದನೆಯ ಆಳ ನಮಗೆ ಅರ್ಥವಾಗುತ್ತದೆ. ಆದರೆ ದುಡುಕಿನ ನಿರ್ಧಾರಗಳು, ವರ್ತನೆಗಳು ಮಾನ್ಯ ಯಡಿಯೂರಪ್ಪನವರ ವ್ಯಕ್ತಿತ್ವ ಹಾಗೂ ಮನಸ್ಸಿಗೆ ಘಾಸಿಯುಂಟುಮಾಡದಂತಿರಲಿ ಎಂದು ಕಳಕಳಿಯಿಂದ ವಿನಂತಿಸುವೆ.