ಅಭಿಮಾನಿ ದೇವರುಗಳು ಕನ್ನಡ ಸಿನಿಮಾಗಳ ಕೈ ಬಿಡಲ್ಲ: ಪ್ರಜ್ವಲ್ ದೇವರಾಜ್

Public TV
2 Min Read
prajwal 2

ಬೆಂಗಳೂರು: ನಮ್ಮ ಅಭಿಮಾನಿ ದೇವರುಗಳು ಖಂಡಿತವಾಗಿ ಕನ್ನಡ ಸಿನಿಮಾಗಳ ಕೈ ಬಿಡುವುದಿಲ್ಲ. ಕೇವಲ ನನ್ನ ಸಿನಿಮಾಕ್ಕೆ ಮಾತ್ರವಲ್ಲದೇ ಇತರೆ ನಟರ ಸಿನಿಮಾಗಳಿಗೂ ಹೀಗೆ ಬೆಂಬಲ ನೀಡಿ ಪ್ರೋತ್ಸಾಹಿಸಿ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದರು.

p

ಇಂದಿನಿಂದ ರಾಜ್ಯದಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿವೆ. ಇಂದು ಕನ್ನಡದ 4 ಸಿನಿಮಾಗಳು ತೆರೆ ಮೇಲೆ ಅಪ್ಪಳಿಸಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವೆಲ್ಲರೂ ಒಂದು ರೀತಿಯ ಕಷ್ಟಕರವಾದ ದಿನದ ಸವಾಲನ್ನು ಹೆದರಿಸಿ ಕೊರೊನಾ ಗೆದ್ದು ಬಂದಿದ್ದೇವೆ. ಇದೀಗ ವ್ಯಾಕ್ಸಿನ್ ಕೂಡ ಬಂದಿದೆ. ಇನ್ನು ಮುಂದೆ ಕನ್ನಡ ಚಿತ್ರರಂಗದ ಹಬ್ಬ ಮತ್ತೆ ಶುರುವಾಗಿದೆ ಅಂತಾನೇ ಹೇಳಬಹುದು. ಸಿನಿಮಾ ವೀಕ್ಷಿಸಲು ಇಷ್ಟೊಂದು ಮಂದಿ ಸೇರಿರುವುದನ್ನು ಕಂಡು ನನಗೆ ಬಹಳ ಖುಷಿಯಾಗುತ್ತಿದೆ. ನಮ್ಮ ಅಭಿಮಾನಿ ದೇವರುಗಳು ಖಂಡಿತವಾಗಿ ಕನ್ನಡ ಸಿನಿಮಾಗಳ ಕೈ ಬಿಡುವುದಿಲ್ಲ ಎಂದು ತಿಳಿದಿದೆ. ಕೇವಲ ನನ್ನ ಸಿನಿಮಾಕ್ಕೆ ಮಾತ್ರವಲ್ಲದೇ ಇತರೆ ನಟರ ಸಿನಿಮಾಗಳಿಗೂ ಹೀಗೆ ಬೆಂಬಲ ನೀಡಿ ಪ್ರೋತ್ಸಹಿಸಿ ಎಂದು ತಿಳಿಸಿದರು.

prajwaldevaraj 69245465 513323282804644 4670287607397748530 n

ಸಿನಿಮಾ ಕುರಿತಂತೆ ಮಾತನಾಡಿದ ಪ್ರಜ್ವಲ್, ನಮಗೆ ಯಾವಾಗಲಾದರೂ ಬೇಸರವಾದರೆ ನಮ್ಮ ಮೂಡ್ ಬದಲಾಯಿಸಿಕೊಳ್ಳಲು ನಾವು ಮೊದಲು ಹಾಸ್ಯ ಅಥವಾ ಮನರಂಜನೆಯ ಕಡೆಗೆ ವಾಲುತ್ತೇವೆ. ಹಾಗೆಯೇ ಹಾಸ್ಯ ಹಾಗೂ ಮನರಂಜನೆ ಖುಷಿಗೆ ಮೆಡಿಸಿನ್ ‘ಇನ್ಸ್‍ಪೆಕ್ಟರ್ ವಿಕ್ರಮ್’. ಈ ಸಿನಿಮಾವನ್ನು ವೀಕ್ಷಿಸಿದರೆ ನೀವು ಎಲ್ಲಾ ನೋವನ್ನು ಮರೆಯುವುದರ ಜೊತೆಗೆ ಮತ್ತೊಮ್ಮೆ ಈ ಸಿನಿಮಾವನ್ನು ನೋಡಬೇಕು ಎಂದು ಅನಿಸುವಂತಿದೆ ಎಂದು ಹೇಳಿದರು.

prajwal web 1

ಸ್ಯಾಂಡಲ್‍ವುಡ್ ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವ್‍ರಾಜ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇನ್ಸ್ ಪೆಕ್ಟರ್ ವಿಕ್ರಮ್ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇನ್ನೂ ನಟ ಪ್ರಜ್ವಲ್ ಪತ್ನಿ ಹಾಗೂ ಸಹೋದರನೊಂದಿಗೆ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದರು. ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಪಡೆಯುತ್ತಿರುವ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ಪ್ರಜ್ವಲ್‍ಗೆ ಜೋಡಿಯಾಗಿ ನಟಿ ಭಾವನಾ ನಟಿಸಿದ್ದಾರೆ. ಈ ಚಿತ್ರಕ್ಕೆ ಸಹಾನ ಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಕ್ಕೆ ಅನೂಪ್ ಸೀಲಿನ್ ಸಂಗೀತ ಸಂಯೋಜಿಸಿದ್ದು, ವಿಕ್ಯಂತ್ ಬಂಡವಾಳ ಹೂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *