ಮೆಲ್ಬರ್ನ್: ಹೊಸ ವರ್ಷದಂದು ರೆಸ್ಟೋರೆಂಟ್‍ಗೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರಿಗೆ ಅಭಿಮಾನಿಯೋರ್ವ ಬಿಲ್ ನೀಡಿ ಔತಣಕೂಟ ಕೊಟ್ಟ ವಿಡಿಯೋ ವೈರಲ್ ಆಗಿತ್ತು. ಆದರೆ ಅದೇ ವಿಡಿಯೋ ಇದೀಗ ರೋಹಿತ್ ಶರ್ಮಾ ಮತ್ತು 4 ಜನ ಸಹ ಆಟಗಾರರಿಗೆ ತೊಂದರೆಗೊಳಗಾಗುವಂತೆ ಮಾಡಿದೆ.
ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್ ಸರಣಿಗೆಂದು ಹೋಗಿರುವ ಭಾರತೀಯ ಆಟಗಾರರು ಅಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿಗೆ ಪತ್ನಿ ಜೊತೆ ಅಭಿಮಾನಿ ನವಲ್‍ದೀಪ್ ಸಿಂಗ್ ಬಂದಿದ್ದರು. ಅವರ ಟೇಬಲ್‍ನ ಮುಂದಿನ ಟೇಬಲ್‍ನಲ್ಲಿ ಕುಳಿತಿದ್ದ ಆಟಗಾರರನ್ನು ನೋಡಿ ಸಂತಸ ಪಟ್ಟ ನವಲ್‍ದೀಪ್ ಕೊನೆಯಲ್ಲಿ ಆಟಗಾರರ ಬಿಲ್ ಪಾವತಿಸಿ ಅವರೊಂದಿಗೆ ಫೋಟೋ ತೆಗಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನವಲ್‍ದೀಪ್ ಸಿಂಗ್ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.
Advertisement
Bhookh nai h so ye order kar diya h taaki inko dekhta rahu ???????????????? pic.twitter.com/cvr3Cfhtl7
— Navaldeep Singh (@NavalGeekSingh) January 1, 2021
Advertisement
ಇದನ್ನು ಗಮನಿಸಿದ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮುನ್ನೆಚ್ಚರಿಕಾ ಕ್ರಮವಾಗಿ ರೆಸ್ಟೋರೆಂಟ್‍ಗೆ ಭೇಟಿ ನೀಡಿದ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಅವರನ್ನು ಭಾರತೀಯ ಮತ್ತು ಆಸ್ಟ್ರೇಲಿಯಾ ತಂಡಗಳಿಂದ ದೂರ ಇರುವಂತೆ ಸೂಚಿಸಿದೆ. ಎರಡು ತಂಡಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
Advertisement
ಬಿಸಿಸಿಐ ಮತ್ತು ಸಿಎ ಈ ಬಗ್ಗೆ ತನಿಖೆ ನಡೆಸುತ್ತಿದ್ದು. ಐವರು ಆಟಗಾರರು ಜೀವ ಸುರಕ್ಷತಾ ವಲಯದ(ಬಯೋ ಬಬಲ್) ನಿಯಮವನ್ನು ಉಲ್ಲಂಘನೆ ನಡೆಸಿದ್ದಾರೆಯೇ ಎಂದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದೆ.
Advertisement
When they got know that i have paid the bill.. Rohit sharma said bhaji pese lelo yaar acha nai lagta.. i said no sir its on me. Pant hugged me and said photo tabhi hogi jab pese loge wapis. I said no bro not happening. Finally sabane photo khichwai 🙂 mja aa gya yaar #blessed
— Navaldeep Singh (@NavalGeekSingh) January 1, 2021