ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಟ ವಿಜಯ್ ಸೇತುಪತಿ

Public TV
1 Min Read
vijay sethupathi 3

ಚೆನ್ನೈ: ಹುಟ್ಟುಹಬ್ಬದಂದು ಲಾಂಗ್ ಹಿಡಿದು ಕೇಕ್ ಕತ್ತರಿಸಿದ ಕಾಲಿವುಡ್ ನಟ ವಿಜಯ್ ಸೇತುಪತಿ ತನ್ನ ತಪ್ಪಿನ ಅರಿವಾಗಿ ಟ್ವೀಟ್ ಮಾಡುವ ಮೂಲಕವಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

1 3

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿಜಯ್ ಸೇತುಪತಿಯವರು ಶೂಟಿಂಗ್ ಸೆಟ್‍ನಲ್ಲೇ ಬರ್ತ್ ಡೇ ಆಚರಿಸಿದ್ದರು. ಈ ವೇಳೆ ಲಾಂಗ್ ಹಿಡಿದು ಕೇಕ್ ಕಟ್ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

vijay sethupathi 6

ವಿಜಯ್ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ನೋಡಿದ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ನಾಯಕ ನಟನಾಗಿ ಹಲವರಿಗೆ ಮಾದರಿಯಾಗಿ ನಿಲ್ಲಬೇಕಿದ್ದ ನೀವು, ಈ ರೀತಿ ತಲ್ವಾರ್‍ನಲ್ಲಿ ಕೇಕ್ ಕತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರು ಪ್ರಶ್ನೆ ಮಾಡಿದ್ದರು. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿರೋಧವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ವಿಜಯ್ ಸೇತುಪತಿಯವರು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ನನ್ನ ಜನ್ಮ ದಿನದ ಶುಭಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ. ಮೂರು ದಿನಗಳ ಹಿಂದೆ ನನ್ನ ಹುಟ್ಟುಹಬ್ಬದ ಆಚರಣೆಯಂದು ತೆಗೆದಿರುವ ಫೋಟೋಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ನಾನು ನಿರ್ದೇಶಕ ಪೊನ್‍ರಾಮ್ ಅವರ ಚಿತ್ರದಲ್ಲಿ ನಟಿಸಲಿದ್ದೇನೆ. ಅವರ ಸಿನಿಮಾದಲ್ಲಿ ಕತ್ತಿ ಪ್ರಮುಖ ಮಾತ್ರವನ್ನು ವಹಿಸುತ್ತದೆ. ಹೀಗಾಗಿ ಕೇಕ್ ಕತ್ತರಿಸಲು ಅದೇ ಕತ್ತಿಯನ್ನು ಬಳಕೆ ಮಾಡಿದ್ದೇನೆ. ನಾನು ಲಾಂಗ್ ಹಿಡಿದು ಕೇಕ್ ಕತ್ತರಿಸುವ ಮೂಲಕವಾಗಿ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಹುಷಾರ್ ಆಗಿರುತ್ತೇನೆ. ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *