ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಜನರು ಭಯಗೊಂಡು ದೇಶ ತೊರೆಯಲು ಆರಂಭಿಸಿದ್ದಾರೆ. 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನರಲ್ಲಿ ಮೂವರು ಪ್ರಾಣ ಕಳೆದಕೊಂಡಿದ್ದಾರೆ.
Advertisement
ಸುರಕ್ಷಿತ ಸ್ಥಳ ತಲುಪಲು ವಿಮಾನ ಏರಿದ ಜನ ವಿಮಾನದ ಟಯರ್ ಹಿಡಿದು ಪ್ರಯಾಣ ಮಾಡಿದ್ದಾರೆ. ವಿಮಾನ ಟೇಕಾಫ್ ಆಗುತ್ತಿದ್ದಂತೆ ಗಾಳಿಯ ರಭಸಕ್ಕೆ ಕಾಬೂಲ್ ಮಧ್ಯಭಾಗದಲ್ಲಿ ಮೂವರು ಮೇಲಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ
Advertisement
Sad scenes from Kabul airport. Thousands trying to board a plane with capacity of few hundreds. Future is uncertain with Taliban at gates of airport. US shud never to forgiven for this act. Pray for Afghanistan. #Talibanpic.twitter.com/Jk8D3Wo5Sw
— Netbuzz Africa (@netbuzzafrica) August 16, 2021
Advertisement
ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ.
Advertisement
Here’s the scene as the U.K. evacuated their nationals in Afghanistan as the Taliban captured most of the country in a matter of days and swept into Kabul Sunday #Talibans #Afghanistan pic.twitter.com/UYyG9HeXDV
— Netbuzz Africa (@netbuzzafrica) August 16, 2021
ವಿಮಾನ ಪ್ರಯಾಣ ಬಸ್, ಪ್ಯಾಸೆಂಜರ್ ರೈಲುಗಳಂತಾಗಿದೆ. ಸಿಕ್ಕ ಸಿಕ್ಕ ವಿಮಾನ ಏರಲು ನೂಕುನುಗ್ಗಲು ಆಗಿದೆ. ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಜನರ ನೂಕುನುಗ್ಗಲು ತಪ್ಪಿಸಲು ಗುಂಡಿನ ದಾಳಿ ನಡೆಸಿ ತಾಲಿಬಾನಿಗಳ ದಾಳಿಗೆ ಐದು ಮಂದಿ ಸಾವನ್ನಪ್ಪಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ವಿಮಾನಗಳ ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಅಫ್ಘಾನ್ ವಾಯಸೀಮೆಯಲ್ಲಿ ವಿಮಾನ ಹಾರಾಡದಂತೆ ಸೂಚನೆ ನೀಡಲಾಗಿದೆ.
ಧಾರವಾಡದ ಕೃಷಿ ವಿವಿ ಸಂಶೋಧನೆಯಲ್ಲಿ ಅಘ್ಘಾನ್‍ನಿಂದ ಬಂದ 15 ವಿದ್ಯಾರ್ಥಿಗಳು ಕುಟುಂಬಸ್ಥರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. 15 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಮತ್ತೆ ಅಘ್ಘಾನ್‍ಗೆ ವಾಪಸ್ ಆಗಿದ್ದಾರೆ. ಕುಟುಂಬಸ್ಥರು ಸುರಕ್ಷವಾಗಿರುವ ಬಗ್ಗೆ ವಿದ್ಯಾರ್ಥಿಗಳಿಗೆ ವಿಶ್ವಾಸ ನೀಡಲಾಗಿದೆ.