ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಯತ್ನಿಸಿದ 36 ವರ್ಷದ ವ್ಯಕ್ತಿ..!

Public TV
1 Min Read
MND 3 2

ಮಂಡ್ಯ: ಅಪ್ರಾಪ್ತೆಯನ್ನು 36 ವರ್ಷದ ವ್ಯಕ್ತಿಗೆ ರಾತ್ರೋ ರಾತ್ರಿ ಮದುವೆ ಮಾಡುತ್ತಿರುವುದನ್ನು ಬಾಲಕಿಯ ತಂದೆ ಸಹಾಯದಿಂದ ಪೊಲೀಸರು ತಡೆದಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಕೊರಟೀಕೆರೆ ಗ್ರಾಮದ ಕನ್ನೇಶ್ವರ ದೇವಸ್ಥಾನದ ಬಳಿ ಜರುಗಿದೆ.

MND 1 2 medium

ಕೋಣನಕೊಪ್ಪಲು ಗ್ರಾಮದ 16 ವರ್ಷದ ಅಪ್ರಾಪ್ತೆಗೆ ಗೋವಿಂದೇಗೌಡನಕೊಪ್ಪಲು ಗ್ರಾಮದ 36 ವರ್ಷದ ವ್ಯಕ್ತಿಯ ಜೊತೆ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗಿನ ಜಾವ ಮೂರು ಗಂಟೆಗೆ ದೇವಸ್ಥಾನದ ಬಳಿ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಈ ವೇಳೆ ಬಾಲಕಿಯ ತಂದೆಗೆ ಈ ಮದುವೆ ಇಷ್ಟ ಇಲ್ಲದ ಕಾರಣ, ತಂದೆ ಪೊಲೀಸರಿಗೆ ಅಧಿಕಾರಿಗಳಿಗೆ ಮದುವೆ ತಡೆಯುವಂತೆ ಹೇಳುತ್ತಾರೆ. ನಂತರ ಮಾಹಿತಿ ತಿಳಿದ ವರನ ಕಡೆಯವರು ಬೇರೆ ಕಡೆ ಮದುವೆ ಮಾಡಿಕೊಳ್ಳೋಣ ಎಂದು ಹುಡುಗಿಯನ್ನು ಕರೆದುಕೊಂಡು ಹೋಗುತ್ತಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

MND 7 medium

ಚಿಕ್ಕೋಸಹಳ್ಳಿಯ ದೊಡ್ಡಕೇರಮ್ಮ ದೇವಸ್ಥಾನದಲ್ಲಿ ಮದುವೆ ಮಾಡಲು ಯತ್ನಿಸುತ್ತಾರೆ ಈ ವಿಷಯ ತಿಳಿದ ಕೆಆರ್‍ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬರುತ್ತಾರೆ. ಈ ವೇಳೆ ವರ ಹಾಗೂ ಸಂಬಂಧಿಕರು ಪರಾರಿಯಾಗಿದ್ದಾರೆ. ಸದ್ಯ ಬಾಲಕಿಯನ್ನು ರಕ್ಷಿಸಿರುವ ಪೊಲೀಸರು ಪರಾರಿಯಾಗಿರುವ ವರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

MND 2 1 medium

Share This Article
Leave a Comment

Leave a Reply

Your email address will not be published. Required fields are marked *