– ಕಾಮುಕನ ವಿರುದ್ಧ ದೂರು ದಾಖಲು
ಜೈಪುರ: ಕಾಮುಕನೊಬ್ಬ ಅಪ್ರಾಪ್ತೆ ಸೇರಿದಂತೆ ಒಂದೇ ಮನೆಯ ನಾಲ್ವರನ್ನು ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಜಿಲ್ಲೆಯೊಂದರಲ್ಲಿ ನಡೆದಿದೆ.
ಕಾಮುಕನನ್ನು ವಿಷ್ಣು ಗುರ್ಜರ್ ಎಂದು ಗುರುತಿಸಲಾಗಿದೆ. ಈತ ಅಂತ್ರಸ್ತ ಕುಟುಂಬದ ಮನೆಯ ಹತ್ತಿರವೇ ದಾಭಾ ಇಟ್ಟುಕೊಂಡಿದ್ದ.
ವಿಷ್ಣು ಗುರ್ಜರ್ ಕುಟುಂಬದ ಮಹಿಳೆಯ ಮೇಲೆ ಒಂದು ವರ್ಷದ ಹಿಂದೆ ಅತ್ಯಾಚಾರ ಎಸಗಿದ್ದನು. ಇದೀಗ ಆರೋಪಿ ಮಹಿಳೆಯ ತಂಗಿಯರು ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದ ಕೂಡಲೇ ಆಕೆ ಪೊಲೀಸರನ್ನು ಸಂಪರ್ಕಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
ಗುರ್ಜರ್ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಂತೆಯೇ ಕುಟುಂಬದ ಇತರ ಮಹಿಳೆಯರು ಕೂಡ ಪೊಲೀಸ್ ಠಾಣೆಗೆ ತೆರಳಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಜನವರಿ 21ರಂದು ಗುರ್ಜರ್ ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ. ಅದೇ ದಿನ ಮಹಿಳೆಯ ಸಹೋದರಿಯರು ಕೂಡ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಚಾರ ಕುಟುಂಬದ ಇತರ ಸದಸ್ಯರ ಗಮನಕ್ಕೆ ಬಂದಿದ್ದು, ಅವರು ಕೂಡ ಗುರ್ಜರ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಆರೋಪಿ ವಿರುದ್ಧ ಜನವರಿ 23 ಮತ್ತು 24ರಂದು ಎರಡು ಅತ್ಯಾಚಾರ ಪ್ರಕರಣ ದಾಖಲಾಗಿದೆ.