ಗಿಡ ನೆಟ್ಟು ಅಪ್ಪ – ಮಗ ಪರಿಸರ ದಿನಾಚರಣೆ ಆಚರಣೆ

Public TV
1 Min Read
HDK NIKHIL

ರಾಮನಗರ: ಬಿಡದಿ ತೋಟದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರಿಸರ ದಿನಾಚರಣೆ ಆಚರಿಸಿದ್ದಾರೆ. ಹೆಚ್ಡಿಕೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ಪರಿಸರ ದಿನಾಚರಣೆ ಆಚರಿಸಿದ್ದಾರೆ.

“ಪರಿಸರವನ್ನು ನಾವು ರಕ್ಷಿಸಿದರೆ, ನಮ್ಮನ್ನು ಪರಿಸರ ರಕ್ಷಿಸುತ್ತದೆ” ಈ ಸತ್ಯವನ್ನು ನಾನು ಕೃಷಿ ಮೂಲಕ ಕಂಡುಕೊಂಡಿದ್ದೇನೆ. ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಅಂತಾ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಕುವೆಂಪು ರಚಿತ ಕವನವನ್ನೂ ಸಹ ಟ್ವೀಟ್ ಮಾಡಿದ್ದು ಹೀಗೆ..

ಸೃಷ್ಟಿಯೊಂದನಂತ ಚಲನೆ,
ಅಖಂಡ ಪ್ರಾಣವಾಹಿನಿ,
ಕ್ಷಣವ ಕನವನರಿವ ಬುದ್ಧಿ
ಕಾಲದೇಶನದಿಯೊಳದ್ದಿ
ಹೊಕ್ಕು ಹರಿದು ತಿಳಿಯಲರಿದು
ಅಗಮ್ಯವದಕೆ ವಾಹಿನಿ ! ಇದನ್ನೂ ಓದಿ: ಮೃಗಾಲಯಗಳನ್ನ ಉಳಿಸಿ ಬೆಳೆಸಿ: ದರ್ಶನ್ ಮನವಿ

ಹಳ್ಳಿಯಿಲ್ಲದ ದೇಶವದು ನಿತ್ಯರೋಗಿ
ಕೊಳೆಯುವುದು ನಿರ್ಜೀವ ಶವದಂತೆಯಾಗಿ!

ಸೃಷ್ಟಿ ಸೌಂದರ್ಯದೊಲ್ಮೆಯೇ ಸೃಷ್ಟಿಕರ್ತಂಗೆ
ಪೂಜೆಯಂ. ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ದಿ? ಪೊಣ್ಮಿದೆ ಸೃಷ್ಟಿ
ರಸದಿಂದೆ, ಬಾಳುತಿದೆ ರಸದಲ್ಲಿ, ರಸದೆಡೆಗೆ ತಾಂ ಪೊರಿಯುತಿದೆ. ಪೊಂದುವುದು ರಸದೊಳೈಕ್ಯವೊತ್ತು
ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಮಮೃತಂ ರಸಂ!

ಶ್ರೀ ಕುವೆಂಪು ಎಂದು ಹೆಚ್‍ಡಿಕೆ ಬರೆದುಕೊಂಡಿದ್ದಾರೆ.

ಜಗತ್ತಿನಾದ್ಯಂತ ಇಂದು ಪರಿಸರ ದಿವನ್ನು ಆಚರಿಸಲಾಗುತ್ತಿದೆ. ಸ್ಯಾಂಡಲ್‍ವುಡ್ ನಟ ದರ್ಶನ್ ಅವರು ಇಮದು ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಗಿಡ ನೆಟ್ಟಿದ್ದಾರೆ. ಕೃಷಿ ಇಲಾಖೆ ರಾಯಭಾರಿಯಾಗಿರುವ ದರ್ಶನ್, ಗಿಡ ನೆಟ್ಟು ಪರಿಸರ ಕಾಳಜಿ ತೋರಿಸಿದ್ದಾರೆ.

https://www.youtube.com/watch?v=-ve74sDZzOo

Share This Article
Leave a Comment

Leave a Reply

Your email address will not be published. Required fields are marked *