– ಸಮಾಧಿ ದೇವಸ್ಥಾನವಿದ್ದಂತೆ
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ಬೈಯೋದನ್ನು ಯಾವತ್ತೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
2ನೃ ವರ್ಷದ ಪುಣ್ಯತಿಥಿಯ ಪ್ರಯುಕ್ತ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪಾಜಿ 24 ಗಂಟೆಯೂ ನಮ್ಮ ಜೊತೆಗೇ ಇರುತ್ತಾರೆ. ಈ ಕಡೆ ಬಂದ್ರೆ ಸಮಾಧಿ ಬಳಿ ಬಂದೇ ಬರುತ್ತೇನೆ. ಇದು ನಮಗೆ ದೇವಸ್ಥಾನ ಇದ್ದಂತೆ ಎಂದರು.
Advertisement
Advertisement
ಮಂಡ್ಯದಲ್ಲಿ ಅಂಬರೀಶ್ ಗುಡಿ ಕಟ್ಟುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೆಸರಲ್ಲಿ ಗುಡಿ ಕಟ್ಟೋದರಲ್ಲಿ ತಪ್ಪಿಲ್ಲ. ನಾನು ಅವರನ್ನು ದೇವರಂತೆ ಪೂಜಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್
Advertisement
ಅವರು ನನ್ನ ಬೈಯುತ್ತಿರುವ ನೆನಪು ತುಂಬಾ ಕಾಡುತ್ತಿದೆ. ಆಗಾಗ ಬೈತಾ ಇದ್ರು. ಈವಾಗ ಅದು ಇಲ್ಲ ಅನ್ನೋ ಬೇಜಾರಿದೆ. ಇಂದು ಆ ವಾಯ್ಸ್ ನಮ್ಮ ಜೊತೆ ಇಲ್ಲ, ಬರ್ರೋ ಇಲ್ಲಿ ಅಂತ ಹೇಳೋ ವಾಯ್ಸ್ ಇಲ್ಲ. ಹೀಗಾಗಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
Advertisement
ಒಟ್ಟಿನಲ್ಲಿ ನಾನು ಇಲ್ಲಿ ಬಂದಾಗ ಕಹಿ ಘಟನೆಗಳನ್ನು ನೆನಪು ಮಾಡಿಕೊಳ್ಳಲು ಹೋಗಲ್ಲ. ದೇವಸ್ಥಾನಕ್ಕೆ ಬಂದು, ದೇವರಿಗೆ ಕೈ ಮುಗಿದು ಹೋಗುತ್ತೇನೆ ಎಂದರು. ಇದನ್ನೂ ಓದಿ: ಅಂಬರೀಶ್ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ: ಅಭಿಷೇಕ್
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ದರ್ಶನ್, ನನ್ನ ಪ್ರೀತಿಯ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದು ಬರೆದುಕೊಳ್ಳುವ ಮೂಲಕ ಅಂಬಿ ನೆನಪು ಮಾಡಿಕೊಂಡಿದ್ದರು.