ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ನನ್ನು ಚಿರು ಮುದ್ದು ಮಗ ಜೂನಿಯರ್ ಚಿರು ಲಾಂಚ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪುಟ್ಟದಾದ ಮುದ್ದು ಕೈಬೆರಳುಗಳಿಂದ ಅಪ್ಪನ ಸಿನಿಮಾದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್‌ನ ವೀಡಿಯೋ ಪ್ಲೇ ಮಾಡುತ್ತಿರುವ ವೀಡಿಯೋವನ್ನು ಮೇಘನಾರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಗರು ಸಿನಿಮಾ ಬಿಡುಗಡೆಯಾಗಿರುವ ದಿನವೇ ಚಿರು ಅಭಿನಯದ ರಾಜಮಾರ್ತಾಂಡ ಟ್ರೈಲರ್ ಮುದ್ದಾದ ಮಗನಿಂದ ಬಿಡುಗಡೆಯಾಗಿರುವುದು ವಿಶೇಷವಾಗಿದೆ.
View this post on Instagram
ರಾಜಾಮಾರ್ತಾಂಡ ಸಿನಿಮಾ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿದೆ. ಚಿರು ಒಂದು ಪಾತ್ರವನ್ನು ಎಷ್ಟೊಂದು ಇಷ್ಟಪಟ್ಟು ಮಾಡುತ್ತಿದ್ದರು ಎನ್ನುವುದು ತಿಳಿದಿದೆ. ಈ ಸಿನಿಮಾವವನ್ನು ತಂಬಾ ಇಷ್ಟಪಟ್ಟು ಮಾಡಿದ್ದರು. ಈ ಸಿನಿಮಾ ಅವರ ಸಿನಿಮಾ ಜರ್ನಿಯಲ್ಲಿ ಅತ್ಯಂತ ವಿಶೇಷವಾಗಿದೆ. ಇಲ್ಲಿವರೆಗೂ ಮಾಡಿರುವ ಪಾತ್ರಗಳಿಗಿಂತ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪನಿಗೋಸ್ಕರ ಅಪ್ಪನಿಗಾಗಿ ಮತ್ತು ಸಿನಿಮಾತಂಡಕ್ಕಾಗಿ ಜೂನಿಯರ್ ಚಿರು ಟ್ರೈಲರ್ ಲಾಂಚ್ ಮಾಡುತ್ತಿದ್ದಾನೆ. ಈ ಸಿನಿಮಾ ತಂಡ ಕುಟುಂಬಕ್ಕೆ ಹತ್ತಿರವಾಗಿದೆ. ಚಿರು ನಟನೆ ಮಾಡಿದ್ದಾರೆ, ಧ್ರುವ ಸರ್ಜಾ ಧ್ವನಿಯನ್ನು ನೀಡಿದ್ದಾರೆ. ಮಗ ಟ್ರೈಲರ್ ಲಾಂಚ್ ಮಾಡಿದ್ದಾರೆ. ಸಿನಿಮಾಕ್ಕೆ ಶುಭಾಶಯಗಳು ಎಂದು ಹೇಳಿ ಮುದ್ದು ಮಗು ಟ್ರೈಲರ್ ರೀಲಿಸ್ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಫೆಬ್ರವರಿ 19ಕ್ಕೆ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತದೆ. ಎಲ್ಲಾ ಅವನ ತಂದೆಗಾಗಿ. ಅಪ್ಪನ ಏಂಜಲ್, ರಾಜಮಾತಾರ್ಂಡ ಟ್ರೈಲರ್ ಅನ್ನು ನನ್ನ ಮಗ ನಾಳೆ ಬಿಡುಗಡೆ ಮಾಡಲಿದ್ದಾನೆ ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು ಅದರಂತೆ ಇದೀಗ ಟ್ರೈಲರ್ ಬಿಡುಗಡೆಯಾಗಿದೆ.
View this post on Instagram
ಚಿರು ನಮ್ಮಿಂದ ದೂರವಾಗಿದ್ದರೂ ಅವರ ಸಿನಿಮಾ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್‍ಗೆ ರೆಡಿಯಾಗಿರುವ ರಾಜಮಾತಾರ್ಂಡ ಸಿನಿಮಾದ ಮೇಲೂ ನಿರೀಕ್ಷೆ ಹೆಚ್ಚಾಗಿದೆ.
ರಾಜಮಾರ್ತಾಂಡ ಸಿನಿಮಾ ಚಿರು ಅಭಿನಯದ ಕೊನೆಯ ಸಿನಿಮವಾಗಿದೆ. ಚಿರು ಸಿನಿಮಾ ಧ್ರುವ ಸಾರ್ಜಾ ಕಂಠದಾನವನ್ನು ಮಾಡಿದ್ದಾರೆ. ಇಂದು ಟ್ರೈಲರ್ ಬಿಡುಗಡೆಮಾಡಿರುವ ಸಂಭ್ರಮದ ಕ್ಷಣಗಳನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ. ಮುದ್ದಾದ ಕೈ ಬೆರಳುಗಳಿಂದ ರೀಲಿಸ್ ಆಗಿರುವ ಟ್ರೈಲರ್ ಹೇಗಿರಲಿದೆ ಎನ್ನುವ ಕೂತುಹೂಲ ಅಭಿಮಾನಿಗಳಲ್ಲಿದೆ.