ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಪೋರ್ನ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕೆ ವ್ಯಕ್ತಿ ಮತ್ತು ಆತನ ಅಪ್ರಾಪ್ತ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನನಲ್ಲಿ ನಡೆದಿದೆ.
ತಂದೆ ಮತ್ತು ಅಪ್ರಾಪ್ತ ಮಗನನ್ನು ತಂಜಾವೂರು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ 16 ವರ್ಷದ ಹುಡುಗನಾಗಿದ್ದು, ಈತ ಇತ್ತೀಚೆಗೆ 11ನೇ ತರಗತಿ ಪರೀಕ್ಷೆಗಳನ್ನು ಬರೆದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಅಶ್ಲೀಲ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಮೊಬೈಲ್ ಫೋನ್ ಪತ್ತೆಹಚ್ಚಲು ಪೊಲೀಸರು ತಂಡವನ್ನು ರಚಿಸಿದ್ದರು. ಅಲ್ಲದೇ ಎಲ್ಲಾ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡವು ಆರೋಪಿಯನ್ನು ಪತ್ತೆ ಹಚ್ಚಲು ಪಾಪನಾಸಂ ಉಪ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ.
ಈ ಪ್ರಕರಣದ ಹೆಚ್ಚಿನ ವಿವರಗಳನ್ನು ಕಲೆ ಹಾಕಲು ಪೊಲೀಸರು ‘ಸೋಶಿಯಲ್ ಮೀಡಿಯಾ ಸೆಲ್’ನ ಸಹಾಯ ಪಡೆದುಕೊಂಡಿದ್ದಾರೆ. ಈ ವೇಳೆ ಅಪ್ರಾಪ್ತ ಹುಡುಗನ ಫೇಸ್ಬುಕ್ ಖಾತೆಯಿಂದ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅಲ್ಲದೇ ಹುಡುಗ ತನ್ನ ಫೇಸ್ಬುಕ್ ಖಾತೆಯನ್ನು ತೆರೆಯಲು ತನ್ನ ತಂದೆಯ ಮೊಬೈಲ್ ಫೋನ್ ಬಳಸಿದ್ದಾನೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ತನಿಖೆಯ ನಂತರ ಪಾಪನಾಸಂ ಪೊಲೀಸರು ಬಾಲಾಪರಾಧಿಯಾಗಿದ್ದರಿಂದ ಆತನ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.