-ವಿದ್ಯಾರ್ಥಿನಿಗೆ ಕಿರುಕುಳದ ಆರೋಪ, ಎಫ್‍ಐಆರ್ ದಾಖಲು
ಲಕ್ನೋ: ಮಗಳು ಅಪಘಾತದಲ್ಲಿ ಸಾವನ್ನಪ್ಪಿಲ್ಲ, ಅದು ಕೊಲೆ ಎಂದು ವಿದ್ಯಾರ್ಥಿನಿ ಸುದೀಕ್ಷಾ ಭಾಟಿ ತಂದೆ ಜೀತೇಂದ್ರ ಭಾಟಿ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಜೀತೇಂದ್ರ ಭಾಟಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಮ್ಮನ್ನು ಸಂಪರ್ಕಿಸಿಲ್ಲ ಮತ್ತು ಎಫ್‍ಐಆರ್ ಸಹ ದಾಖಲಿಸಿಕೊಂಡಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೂ ಸತ್ಯ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕೆ ವ್ಯಕ್ತವಾಗ್ತಿದೆ. ಪೊಲೀಸರು ಇದೊಂದು ಅಪಘಾತ ಎಂದು ಹೇಳುತ್ತಿದ್ದಾರೆ. ಆದ್ರೆ ಉದ್ದೇಶಪೂರ್ವಕವಾಗಿ ಈ ಅಪಘಾತ ಮಾಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಸುದೀಕ್ಷಾ ಪ್ರಕರಣ ಸುತ್ತ ಅನುಮಾನಗಳ ಹುತ್ತ ಸೃಷ್ಟಿಯಾಗುತ್ತಿದ್ದಂತೆ ಬುಲಂದಶಹರ್ ಪೊಲೀಸರು ಸುದೀಕ್ಷಾ ಕುಟುಂಬಸ್ಥರ ದೂರಿನನ್ವಯ ಎಫ್‍ಐಆರ್ ದಾಖಲಿಕೊಂಡಿದ್ದಾರೆ. ಸಂಬಂಧಿ ಜೊತೆ ಬೈಕಿನಲ್ಲಿ ಸುದೀಕ್ಷಾ ಬರೋವಾಗ ಹಿಂದಿನಿಂದ ಬಂದ ಬುಲೆಟ್ ನಲ್ಲಿ ಬಂದ ಸವಾರರಿಬ್ಬರು ಓವರ್ ಟೇಕ್ ಮಾಡಿದ್ದಾರೆ. ಹಾಗೆ ಸುದೀಕ್ಷಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಬೈಕ್ ಬ್ಯಾಲೆನ್ಸ್ ತಪ್ಪಿದರಿಂದ ಸುದೀಕ್ಷಾಳ ಸಾವು ಆಗಿದೆ ಜೀತೇಂದ್ರ ಭಾಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಐಪಿಸಿ ಸೆಕ್ಷನ್ 279 (ಅತಿವೇಗದ ಚಾಲನೆ), 304-ಎ (ಬೇಜವಾಬ್ದಾರಿಯಿಂದ ಸಾವು ಆಗುವುದು) ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ಕುಟುಂಬಸ್ಥರು ಬೈಕ್ ಸುದೀಕ್ಷಾ ಚಿಕ್ಕಪ್ಪ ಚಲಾಯಿಸುತ್ತಿದ್ರು ಎಂದು ಹೇಳುತ್ತಿದ್ದರು. ಆದ್ರೆ ಸುದೀಕ್ಷಾಳ ಅಪ್ರಾಪ್ತ ಸೋದರ ಬೈಕ್ ಚಲಾಯಿಸುತ್ತಿದ್ದ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಹೇಳಿದ್ದಾರೆ.