ಬೆಂಗಳೂರು: ನಾಲ್ಕೈದು ಲಾಕ್‍ಡೌನ್ ಸಡಿಲಿಕೆಯ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಕಡಿಮೆ ಬರುವ ಜಿಲ್ಲೆಗಳಿಗೆ ಏನು ಸಡಿಲಿಕೆ ನೀಡಬೇಕು ಎಂಬುದರ ಕುರಿತು ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗುವುದು ಎಂದು ಜೂನ್ 14ರ ಮುಂಚೆಯೇ ಅನ್‍ಲಾಕ್ ಮಾಡುವ ಕುರಿತು ಸುಳಿವು ನೀಡಿದರು.
Advertisement
Advertisement
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜಧಾನಿಯಲ್ಲಿ ಐದು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ಇನ್ನು ರಾಜಧಾನಿಯಲ್ಲಿ ಶುಕ್ರವಾರ ಪಾಸಿಟಿವಿಟಿ ರೇಟ್ ಶೇ.4.94 ಗೆ ಬಂದಿದೆ. ಅಂದರೆ ಬೆಂಗಳೂರಿನಲ್ಲಿ 100 ಜನರಿಗೆ ಟೆಸ್ಟ್ ಮಾಡಿದ್ರೆ 4 ಜನರಿಗೆ ಮಾತ್ರ ಪಾಸಿಟಿವಿ ಆಗಿದೆ.
Advertisement
Advertisement
ಇಂದು ಬೆಂಗಳೂರಿನಲ್ಲಿ ಕಡಿಮೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ 2,724 ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಮೂರು ತಿಂಗಳ ನಂತರ ಮೂರು ಸಾವಿರಕ್ಕಿಂತ ಒಳಗಡೆ ಕೇಸ್ ದಾಖಲಾಗ್ತಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲೂ 500 ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ.