ಯಾದಗಿರಿ: ಅನ್‍ಲಾಕ್ ಹಿನ್ನೆಲೆ ಮತ್ತೆ ಮಹಾನಗರಗಳತ್ತ ಜಿಲ್ಲೆಯ ಜನರ ಮಹಾ ವಲಸೆ ಆರಂಭವಾಗಿದೆ. ರೈಲಿನ ಮೂಲಕ ಬೆಂಗಳೂರು, ಮುಂಬೈ, ಪುಣೆ ಕಡೆ ಗ್ರಾಮೀಣ ಜನರ ಗುಳೆ ಹೋಗುತ್ತಿದ್ದಾರೆ.ವಿಪರ್ಯಾಸ ಎಂದರೆ ರಾಜ್ಯದಲ್ಲೇ ಅತೀ ಹೆಚ್ಚು ಜನ ಗುಳೆ ಹೋಗುವ ಕುಖ್ಯಾತಿಗೆ ಯಾದಗಿರಿ ಪಾತ್ರವಾಗಿದೆ.
Advertisement
ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ರಾಜ್ಯದಲ್ಲಿ ಘೋಷಣೆಯಾದ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನರ ಬದುಕು ದುಸ್ಥರವಾಗಿದೆ. ಎರಡೆರಡು ಬಾರಿ ಲಾಕ್‍ಡೌನ್ ಆದ ಪರಿಣಾಮ ಕೃಷಿಗಾಗಿ ಊರಿನಲ್ಲಿ ಸಾಲ ಮಾಡಿ ಅದನ್ನು ತೀರಸಲಾಗದೆ, ಸಾಲಕ್ಕೆ ಅಂಜಿ ಕೆಲವರು ಊರು ಬೀಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ಬದುಕನ್ನು ಕಟ್ಟಿಕೊಳ್ಳಲು ದೂರದ ಪಟ್ಟಣಗಳಿಗೆ ರೈಲಿನ ಮೂಲಕ ಗುಳೆ ಹೊರಟಿದ್ದಾರೆ. ಇದನ್ನೂ ಓದಿ: ಯಾದಗಿರಿ ಜಿಲ್ಲೆಯ ನದಿಪಾತ್ರದಲ್ಲಿ ಫುಲ್ ಅಲರ್ಟ್ – 9 ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ
Advertisement
Advertisement
ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ನರೇಗಾ ಯೋಜನೆಯೂ ಸಹ ಹಳ್ಳ ಹಿಡಿದಿದೆ. ಅಧಿಕಾರಿಗಳು ಸಹ ಜನರಿಗೆ ಸಮರ್ಪಕವಾಗಿ ಕೂಲಿ ನೀಡುತ್ತಿಲ್ಲ. ಇನ್ನೂ ಕೆಲವು ಕಡೆ ದುಡಿದ ಕೆಲಸಕ್ಕೆ ಕೂಲಿ ಸರಿಯಾಗಿ ನೀಡುತ್ತಿಲ್ಲ. ಇದರಿಂದಾಗಿ ಬೇಸತ್ತು ಜನ ದೊಡ್ಡ ದೊಡ್ಡ ನಗರಗಳತ್ತ ಮುಖ ಮಾಡಿದ್ದಾರೆ.
Advertisement