ಬೆಂಗಳೂರು: ರಾಜ್ಯಾದ್ಯಂತ ಲಾಕ್‌ಡೌನ್ ತೆರವಾಗುವುದರ ಜೊತೆಗೆ ರಾತ್ರಿಯ ಕರ್ಪ್ಯೂ ಅವಧಿಯನ್ನು ಸರ್ಕಾರ ಇಳಿಕೆ ಮಾಡಿದೆ.
ಮಂಗಳವಾರ ರಾತ್ರಿ ಹೊಸ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದ್ದು, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ನೈಟ್ ಕರ್ಫ್ಯೂ ಇರಲಿದೆ. ಈ ಮೊದಲು ರಾತ್ರಿ 8 ಗಂಟೆಯಿಂದ ನೈಟ್ ಕರ್ಫ್ಯೂ ಆರಂಭವಾಗುತ್ತಿತ್ತು.
Advertisement
ಅನ್‌ಲಾಕ್ 2 ರ ಮಾರ್ಗಸೂಚಿಗಳ ಪೈಕಿ ಕೆಲ ಅಂಶಗಳನ್ನು ಬದಲಾವಣೆಗೊಳಿಸಿ ಸರ್ಕಾರ ಈಗ ಜಾರಿ ಮಾಡಲು ಮುಂದಾಗುತ್ತಿದೆ.
Advertisement
Advertisement
ಮಾರ್ಗಸೂಚಿಯಲ್ಲಿ ಏನಿದೆ?
– ಮೊದಲು ಇದ್ದಂತೆ ಭಾನುವಾರದ ಕರ್ಫ್ಯೂ ಮುಂದುವರಿಯಲಿದೆ.
– ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆಯಬಹುದು.
– ಜನಸಂದಣಿಯನ್ನು ತಡೆಗಟ್ಟಲು ಬೆಂಗಳೂರು ಸೇರಿ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ತರಕಾರಿ ಮಾರುಕಟ್ಟೆಗಳು ಸ್ಥಳಾಂತರ ಮಾಡಬೇಕು.
– ಎಪಿಎಂಸಿಗಳಿಗೆ ಅಥವಾ ವಿಶಾಲ ಜಾಗಗಳಿಗೆ ತರಕಾರಿ ಮಾರುಕಟ್ಟೆಗಳು ಶಿಫ್ಟ್ ಆಗಲಿದೆ.
Advertisement
– ಪಾರ್ಕ್ ಗಳಲ್ಲಿ ವಾಕ್ ಮಾಡಬಹುದು ಆದರೆ ಕಲ್ಲಿನ ಬೆಂಚ್‌ಗಳ ಮೇಲೆ ಕುಳಿತುಕೊಳ್ಳುವಂತಿಲ್ಲ.
– ಉದ್ಯಾನನವಗಳಲ್ಲಿ ಜಿಮ್ ಸಲಕರಣೆಗಳನ್ನು ಬಳಸಿ ವ್ಯಾಯಾಮಕ್ಕೆ ನಿಷೇಧ ಹೇರಲಾಗಿದೆ.
– ಕಂಟೈನ್ಮೆಂಟ್ ವಲಯಗಳಲ್ಲಿ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧ ಮುಂದುವರಿಕೆ.
– ಜುಲೈ 31ರವರೆಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.