ನವದೆಹಲಿ: ಅನ್‍ಲಾಕ್ ಬಳಿಕ ದೇಶದ ಆರ್ಥಿಕತೆಯ ಚೇತರಿಕೆಯ ಸುಳಿವು ಸಿಕ್ಕಿದೆ. ಜುಲೈ-ಸೆಪ್ಟೆಂಬರ್ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ -7.5%ಕ್ಕೆ ಬಂದು ನಿಂತಿದೆ.
ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ -23.9%ರಷ್ಟು ಕುಸಿತ ಕಂಡು ಇತಿಹಾಸ ಸೃಷ್ಟಿಸಿತ್ತು. ಇದು ಕಳೆದ 40 ವರ್ಷಗಳಲ್ಲೇ ಅತ್ಯಂತ ದೊಡ್ಡ ಕುಸಿತವಾಗಿತ್ತು. ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದ್ದ ಜಿಡಿಪಿ ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.
Advertisement
2019-2020ರ ಎರಡನೇ ತ್ರೈಮಾಸಿಕ Vs 2020- 21 ಎರಡನೇ ತ್ರೈಮಾಸಿಕ
Advertisement
Advertisement
Advertisement
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಜಿಡಿಪಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, 2020-21ರ ಎರಡನೇ ತ್ರೈಮಾಸಿಕದಲ್ಲಿ ದೇಶದ ಒಟ್ಟು ಒಟ್ಟು ಮೌಲ್ಯವರ್ಧನೆ(ಜಿವಿಎ) 30.49 ಲಕ್ಷ ಕೋಟಿ ರೂ. ಆಗಿದೆ. 2019-20ರ ಎರಡನೇ ತ್ರೈಮಾಸಿಕದಲ್ಲಿನ 32.78 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ 7.5%ರಷ್ಟು ಕುಸಿತವಾಗಿದೆ ಎಂದು ತಿಳಿಸಿದೆ.
ಯಾವುದು ಎಷ್ಟಿದೆ?
ಉತ್ಪದನಾ ವಲಯ ಮೊದಲ ತ್ರೈಮಾಸಿಕದಲ್ಲಿ -39.3% ಕುಸಿತಗೊಂಡಿದ್ದರೆ ಎರಡನೇ ತ್ರೈಮಾಸಿಕದಲ್ಲಿ 0.6ಕ್ಕೆ ಏರಿಕೆಯಾಗಿದೆ.
ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ ಮತ್ತು ಸೇವೆ ಮೊದಲ ತ್ರೈಮಾಸಿಕದಲ್ಲಿ -47.4% ಕುಸಿದಿದ್ದರೆ ಈ ಬಾರಿ -10.3% ರಷ್ಟು ಏರಿಕೆಯಾಗಿದೆ.
ಕೃಷಿ, ಅರಣ್ಯ, ಮೀನುಗಾರಿಕೆ ಮೊದಲ ತ್ರೈಮಾಸಿಕದಲ್ಲಿ 5.7%ರಷ್ಟು ಬೆಳವಣಿಗೆ ಸಾಧಿಸಿದ್ದರೆ ಈ ಬಾರಿ ಇದು 7.7%ಕ್ಕೆ ಏರಿಕೆಯಾಗಿದೆ.
ಮೊದಲ ತ್ರೈಮಾಸಿಕದಲ್ಲಿ ರಫ್ತಿನ ಪ್ರಮಾಣ 21.1% ಇದ್ದರೆ ಈ ತ್ರೈಮಾಸಿಕದಲ್ಲಿ ಇದು 20.9%ಕ್ಕೆ ಕುಸಿತಗೊಂಡಿದೆ. ಮೊದಲ ತ್ರೈಮಾಸಿಕದಲ್ಲಿ ಆಮದು ಪ್ರಮಾಣ 18.3% ಇದ್ದರೆ ಎರಡನೇ ತ್ರೈಮಾಸಿಕದಲ್ಲಿ ಇದು 19.5%ಕ್ಕೆ ಏರಿಕೆಯಾಗಿದೆ.