ಬಳ್ಳಾರಿ: ಅನೈತಿಕ ಸಂಬಂಧ ವಿಚಾರವಾಗಿ ಪತಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಇರಾಳ್ ಗ್ರಾಮದಲ್ಲಿ ನಡೆದಿದೆ.
ಇರಾಳ್ ಗ್ರಾಮದ ತಬಸಮ್ (28) ಹಾಗೂ ಆಕೆಯ ಪ್ರಿಯಕರ ಫಯಾಜ್ ಅಹಮದ್ (26)ಕೊಲೆಯಾಗಿದವರಾಗಿದ್ದಾರೆ. ತಬಸಮ್‍ಳ ಪತಿ ಜಹಾಂಗೀರ್ ಕೊಲೆ ಮಾಡಿರುವ ಆರೋಪಿ.
ತಬಸಮ್ ಹಾಗೂ ಮಕ್ಕಳು ಜನವರಿ 6 ರಂದು ಇರಾಳ್ ನಲ್ಲಿನ ಮನೆ ಬಿಟ್ಟು ಹೋಗಿದ್ದಾಳೆಂದು ಪತಿ ಜಹಾಂಗೀರ್ ಜನವರಿ 15ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಆದರೆ ಪತ್ನಿ ಬೇರಯವರ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿರುವ ವಿಷಯ ಪತಿ ಜಹಾಂಗೀರ್ ಗೆ ಈ ಮೊದಲೇ ಗೊತ್ತಿತ್ತು. ಆದರೆ ಪತ್ನಿ ಮತ್ತು ಮಕ್ಕಳನ್ನು ಹುಡುಕುವ ಸಂದರ್ಭದಲ್ಲಿ ಪತ್ನಿಯ ಜೊತೆಯಲ್ಲಿ ಆಕೆಯ ಪ್ರಿಯಕರ ಇರುವುದನ್ನು ಜಹಾಂಗೀರ್ ನೋಡಿದ್ದಾನೆ. ಸಿಟ್ಟಿನಿಂದ ಇದ್ದ ಜಹಾಂಗೀರ್ ತಕ್ಷಣ ಹತ್ತಿರದಲ್ಲೇ ಇದ್ದ ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಜೋಡಿ ಕೊಲೆ ಮಾಡಿದ ಬಳಿಕ ಜಹಾಂಗೀರ್ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ವಿ ಅಸೂದೆ ಹಾಗೂ ಪಿಎ ತಿಮ್ಮಣ್ಣ ಚಾಮನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.