ಮುಂಬೈ: ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಅನೇಕ ವರ್ಷ ಕಳೆದಿದೆ. ಆದರೆ ಇದೀಗ ಅವರು ಆಗಿರುವ ಮೊದಲ ಭೇಟಿ ಹೇಗಿತ್ತು ಎನ್ನುವ ಕುರಿತಾಗಿ ವಿರಾಟ್ ಹೇಳಿಕೊಂಡಿದಾರೆ.
ಅನುಷ್ಕಾ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2013ರಲ್ಲಿ. ನಾನು ಸೆಟ್‍ನಲ್ಲಿ ಅನುಷ್ಕಾ ಅವರನ್ನು ಭೇಟಿ ಮಾಡಿದ್ದೆ. ಆಗ ತುಂಬಾನೇ ನರ್ವಸ್ ಆಗಿದ್ದೆ. ಹೀಗಾಗಿ, ಒಂದು ಜೋಕ್ ಹೇಳಿದೆ. ನನಗೆ ಏನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. ಈ ಕಾರಣಕ್ಕೆ ನಾನು ಜೋಕ್ ಹೇಳಿದೆ. ಅನುಷ್ಕಾ ತುಂಬಾನೇ ಎತ್ತರವಾಗಿ ಕಾಣುತ್ತಿದ್ದರು. ಹೀಲ್ಸ್ ಹಾಕಿಕೊಂಡಿದ್ದರು. ಅವರು ತುಂಬಾನೇ ಕಾನ್ಫಿಡೆಂಟ್ ಆಗಿದ್ದರು ಎಂದು ವಿರಾಟ್ ಮೊದಲ ಭೇಟಿ ಅನುಭವ ಹಂಚಿಕೊಂಡಿದ್ದಾರೆ.
What a week it has been! ✨
Spoke to the superstar of world cricket about fatherhood, his love life, spirituality, social media, leadership and ofcourse Team INDIA ❤️
Coming soon! ????#ENGvIND @imVkohli @SkyCricket pic.twitter.com/U0iNQYntzD
— DK (@DineshKarthik) August 2, 2021
ವಮಿಕಾ ಜನಿಸಿದ್ದು ಕುಟುಂಬಕ್ಕೆ ಖುಷಿ ತಂದಿದೆ. ಆದರೆ, ಇದನ್ನು ನೋಡೋಕೆ ಅವರ ತಂದೆ ಇಲ್ಲ ಎನ್ನುವ ವಿಚಾರ ಬೇಸರ ತರಿಸಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್ ನಾನು ಕ್ರಿಕೆಟ್ ಆಡುವುದನ್ನು ನೋಡುವುದಕ್ಕೂ ನನ್ನ ತಂದೆ ಇಲ್ಲ. ಈಗ ನನ್ನ ಮಗಳನ್ನು ನೋಡೋಕು ನನ್ನ ತಂದೆ ಇಲ್ಲ. ನನ್ನ ಅಮ್ಮನ ಮುಖದಲ್ಲಿ ಎಲ್ಲಾ ಖುಷಿಯನ್ನು ಕಾಣುತ್ತಿದ್ದೇನೆ ಎಂದಿದ್ದಾರೆ.
View this post on Instagram
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಅನೇಕ ವರ್ಷ ಕಳೆದಿದೆ. ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ 2017ರಲ್ಲಿ ಮದುವೆ ಆಗಿತ್ತು. ಈ ವರ್ಷದ ಆರಂಭದಲ್ಲಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ವಿರಾಟ್ ಅನುಷ್ಕಾ ಮೊದಲ ಭೇಟಿ ಬಗ್ಗೆ ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
View this post on Instagram