– ದೆಹಲಿಯಿಂದ್ಲೂ ಪೊಲೀಸರಿಗೆ ಒತ್ತಡ
– 6 ಸಿಮ್ ಬಳಸ್ತಿದ್ದ ನಿರೂಪಕಿ
ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್ ಪೆಕ್ಟರ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದ್ದು, ಇದರ ಹಿಂದೆ ಸ್ಥಳೀಯ ಶಾಸಕರೊಬ್ಬರ ಕೈವಾಡವಿದೆ ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಹೌದು. ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ವರ್ಗಾವಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರು ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದರು. ಈ ವೇಳೆ ಕಿಶೋರ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಶಾಸಕರು ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯದ ನಿಮಿಷಾಂಬ ದೇಗುಲಕ್ಕೆ ಅನುಶ್ರೀ ಭೇಟಿ – ವಿಶೇಷ ಪೂಜೆ ಸಲ್ಲಿಕೆ
Advertisement
Advertisement
ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ ಬಿಡುವಂತೆ ಒತ್ತಾಯ ಹೇರಿದ್ದರು. ಆದರೆ ಶಾಸಕನ ಒತ್ತಾಯಕ್ಕೆ ಶಿವಪ್ರಕಾಶ್ ಮಣಿದಿರಲಿಲ್ಲ. ಹೀಗಾಗಿ ಇದೀಗ ಶಿವಪ್ರಕಾಶ್ ನೇತೃತ್ವದಲ್ಲೇ ನಡೆಯುತ್ತಿದ್ದ ಕಂಪ್ಲೀಟ್ ಡ್ರಗ್ಸ್ ಪ್ರಕರಣ ತನಿಖಾ ಉತ್ತುಂಗದಲ್ಲಿದ್ದಾಗ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ
Advertisement
ಇಷ್ಟು ಮಾತ್ರವಲ್ಲದೆ ಅನುಶ್ರೀ ಬಚಾವ್ ಮಾಡಲು ದೆಹಲಿಯಿಂದಲೂ ಪ್ರಭಾವ ಬೀರಲಾಗುತ್ತಿದೆ. ದೆಹಲಿಯಲ್ಲಿರುವ ಪ್ರಭಾವಿ ನಾಯಕರು ಕೂಡ ಪ್ರಕರಣದಿಂದ ಅನುಶ್ರೀಯನ್ನು ಕೈಬಿಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ
ಅನುಶ್ರೀ ದೂರವಾಣಿ ಕರೆಗಳ ಸಾಕ್ಷ್ಯ ಕೆದಕಿರುವ ಸಿಸಿಬಿಗೆ ಅಚ್ಚರಿಯಾಗಿದೆ. 6 ಸಿಮ್ ಬಳಸ್ತಿದ್ದ ಅನುಶ್ರೀ, ಸಿಸಿಬಿ ನೋಟಿಸ್ ಬೆನ್ನಲ್ಲೇ ನಾಲ್ವರು ಪ್ರಭಾವಿಗಳಿಗೆ ಫೋನ್ ಮಾಡಿದ್ದಾರೆ. ಮಾಜಿ ಸಿಎಂ, ಮಾಜಿ ಸಿಎಂ ಮಗ ಹಾಗೂ ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಗೂ ಕರೆ ಮಾಡಿದ್ದರು. 3 ಪಕ್ಷಗಳ ಮೂವರು ನಾಯಕರಿಗೆ ಕಾಲ್ ಮಾಡಿದ್ದರು ಎಂದು ದೂರವಾಣಿ ಕರೆ ದಾಖಲೆ ಪರಿಶೀಲನೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.