ಅನುರಾಗ್ ಕಶ್ಯಪ್ ಲೈಂಗಿಕ ಕಿರುಕುಳ ನೀಡಿದ್ದಾರೆ- ನಟಿ ಪಾಯಲ್

Public TV
3 Min Read
payal anurag

ಮುಂಬೈ: ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ನಟಿ, ಅನುರಾಗ್ ಕಶ್ಯಪ್ ನನ್ನೊಂದಿಗೆ ಬಲವಂತವಾಗಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ದಯವಿಟ್ಟು ಬೇಗ ಕ್ರಮ ಕೈಗೊಳ್ಳಿ ಸೃಜನಶೀಲ ವ್ಯಕ್ತಿಯ ಹಿಂದಿನ ರಾಕ್ಷಸ ಗುಣವನ್ನು ದೇಶ ನೋಡಲಿ. ಇದರಿಂದ ನನಗೆ ಹಾನಿಯಾಗಬಹುದು ಎಂಬುದರ ಅರಿವು ನನಗಿದೆ. ನನ್ನ ಸುರಕ್ಷತೆಗೆ ಅಪಾಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿ ಕೇಳಿಕೊಂಡಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಪ್ರಧಾನಿ ಕಚೇರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಯಲ್ ಟ್ವೀಟ್ ಟ್ಯಾಗ್ ಮಾಡಿದ್ದಾರೆ.

Capture 18

ಪಾಯಲ್ ಆರೋಪಕ್ಕೆ ಅನುರಾಗ್ ಕಶ್ಯಪ್ ಸರಣಿ ಟ್ವೀಟ್‍ಗಳ ಮೂಲಕ ಪ್ರತಿಕ್ರಿಯಿಸಿದ್ದು, ನನ್ನನ್ನು ಸುಮ್ಮನಿರಿಸುವ ಪ್ರಯತ್ನವನ್ನು ತುಂಬಾ ಸಮಯದ ಬಳಿಕ ಮಾಡುತ್ತಿದ್ದೀರಿ. ಇರಲಿ, ನನ್ನನ್ನು ಮೌನಗೊಳಿಸುವ ಪ್ರಯತ್ನದಲ್ಲಿ ನಿಮ್ಮ ಜೊತೆಗೆ ಹಲವು ಮಹಿಳೆಯರನ್ನು ಎಳೆದು ತಂದಿದ್ದೀರಿ. ಸ್ವಲ್ಪ ಮಿತಿ ಇರಲಿ, ಯಾವುದೇ ಆರೋಪ, ಏನೇ ಇರಲಿ ಇದೆಲ್ಲವೂ ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಮೇಲೆ ಆರೋಪ ಹೊರಿಸುವ ಮೂಲಕ ನೀವು ನನ್ನ ಕಲಾವಿದರು ಹಾಗೂ ಬಚ್ಚನ್ ಕುಟುಂಬವನ್ನು ಎಳೆಯಲು ಪ್ರಯತ್ನಿಸಿದ್ದೀರಿ ಆದರೆ ವಿಫಲವಾಗಿದ್ದೀರಿ. ನಾನು ಎರಡು ಬಾರಿ ವಿವಾಹವಾಗಿದ್ದೇನೆ, ಅದು ನನ್ನ ಅಪರಾಧವಾಗಿದ್ದರೆ ಅದನ್ನು ಸ್ವೀಕರಿಸುತ್ತೇನೆ ಮತ್ತು ತುಂಬಾ ಪ್ರೀತಿಸುತ್ತೇನೆ. ಇದನ್ನೂ ನಾನು ಒಪ್ಪುತ್ತೇನೆ.

ಈ ಕುರಿತು ನನ್ನ ಮೊದಲ ಪತ್ನಿ, ಎರಡನೇ ಪತ್ನಿ ಅಥವಾ ಇನ್ನಾವುದೇ ಲವರ್ ಆಗಲಿ ಇಲ್ಲವೆ ಅನೇಕ ನಟಿಯರೇ ಆಗಲಿ. ಹಲವು ನಟಿಯರು ಹಾಗೂ ಮಹಿಳೆಯ ತಂಡದೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅಲ್ಲದೆ ಹಲವು ಮಹಿಳೆಯರು ಖಾಸಗಿಯಾಗಿ ಹಾಗೂ ಸಾರ್ವಜನಿಕವಾಗಿ ನನ್ನನ್ನು ಭೇಟಿ ಮಾಡಿದ್ದಾರೆ ಎವರೆಲ್ಲರನ್ನೂ ಕೇಳಿ ಎಂದು ಹೇಳಿದ್ದಾರೆ.

ನಾನು ಆ ರೀತಿ ವರ್ತಿಸುವುದಿಲ್ಲ. ಇಂತಹ ವರ್ತನೆಯನ್ನು ಸಹಿಸುವುದೂ ಇಲ್ಲ. ಏನಾಗುತ್ತದೆಯೋ ನೋಡೋಣ. ಈ ಆರೋಪ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ನಿಮ್ಮ ವಿಡಿಯೋದಲ್ಲೇ ಗೋಚರಿಸುತ್ತದೆ. ನನ್ನ ಮೇಲಿನ ನಿಮ್ಮ ಆಶೀರ್ವಾದ ಹಾಗೂ ಪ್ರೀತಿ ಹೀಗೆ ಇರಲಿ. ಇಂಗ್ಲಿಷ್ ಟ್ವೀಟ್‍ಗೆ ಹಿಂದಿಯಲ್ಲಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *