ಕೊಪ್ಪಳ: ಮಹಾಮಾರಿ ಕೊರೊನಾ ಇಡೀ ದೇಶಾದ್ಯಾಂತ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಸಂದರ್ಭದಲ್ಲಿ ಖಾಸಗಿ ಕಂಪ್ಯೂಟರ್ ಕೋಚಿಂಗ್ ಸೆಂಟರ್‌ಗಳು ಅವಕಾಶ ಇಲ್ಲದಿದ್ದರು ತೆರೆದಿವೆ.
ಜಿಲ್ಲೆಯ ಗಂಗಾವತಿ ನಗರದಲ್ಲಿ ಅನಧಿಕೃತವಾಗಿ ಯಾರ ಅನುಮತಿ ಇಲ್ಲದೆ ಖಾಸಗಿ ಕಂಪ್ಯೂಟರ್ ಸೆಂಟರ್‌ಗಳು ನಡೆಯುತ್ತಿವೆ. ನಿತ್ಯ ನೂರಾರು ವಿದ್ಯಾರ್ಥಿಗಳು ಕಂಪ್ಯೂಟರ್ ಕೋಚಿಂಗ್ ಪಡೆಯುತ್ತಿದ್ದಾರೆ. ಕಂಪ್ಯೂಟರ್ ಕೋಚಿಂಗ್ ನಡೆಸಲು ಸರ್ಕಾರದಿಂದ ಯಾವ ಅನುಮತಿ ಬಂದಿಲ್ಲ. ಆದರೂ ಕೂಡ ಸರ್ಕಾರದ ಯಾವ ನಿಯಮಗಳನ್ನು ಪಾಲಿಸದೆ ಸೆಂಟರ್ ನಡೆಸಲಾಗುತ್ತಿದೆ.
ಕೊಚಿಂಗ್ ಸೆಂಟರಿನಲ್ಲಿ ಯಾವುದೇ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋಚಿಂಗ್ ನಡೆಸುತ್ತಿರುವುದು ಕಂಡು ಬಂದಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ರಣಕೇಕೆ ಬಾರಿಸುತ್ತಿದೆ. ಅದನ್ಯಾವುದನ್ನು ಲೆಕ್ಕಿಸದೆ ಕೋಚಿಂಗ್ ಹೆಸರಿನಲ್ಲಿ ನೂರಾರು ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿದೆ. ಆದರೆ ಸ್ಥಳೀಯ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅನುಮತಿ ಇಲ್ಲದೆ ನಡೆಸುತ್ತಿರುವ ಕಂಪ್ಯೂಟರ್ ಕೋಚಿಂಗ್ ಸೆಂಟರ್‌ಗಳನ್ನ ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಶತಕ ದಾಟಿದ್ದು, ಇನ್ನೂ ಹೆಚ್ಚಾಗುವ ಸಂಭವವಿದೆ. ಹೀಗಾಗಿ ಕೂಡಲೇ ಇಂತಹ ಸೆಂಟರ್‌ಗಳನ್ನು ಬಂದ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಕಂಪ್ಯೂಟರ್ ಸೆಂಟರ್ ಅವರು ಮಾತ್ರ ನಮಗೆ ತೆರೆಯಲು ಅವಕಾಶ ಇದೆ ಎಂದು ಹೇಳುತ್ತಿದ್ದಾರೆ.