– ಧೋನಿ ಇರುವವರೆಗೂ ಚೆನ್ನೈ ತಂಡ ಉಸಿರಾಡುತ್ತಿರುತ್ತದೆ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರು ಐಪಿಎಲ್-2020ಯನ್ನು ಆಳುತ್ತಾರೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಐಪಿಎಲ್ ಆರಂಭಕ್ಕೆ ಕೇವಲ ಇನ್ನು ಒಂದು ವಾರ ಬಾಕಿಯಿದೆ. ಎಲ್ಲ ತಂಡಗಳು ಯುಎಇ ಮೈದಾನದಲ್ಲಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿವೆ. ತಡವಾದರೂ ಚೆನ್ನೈ ತಂಡ ಕೂಡ ಅಭ್ಯಾಸವನ್ನು ಆರಂಭಿಸಿದೆ. ಈ ನಡುವೆ ಅವರದ್ದೇ ವಾಹಿನಿಯ ಯುಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಎಂಎಸ್ ಧೋನಿಯನ್ನು ಹಾಡಿ ಹೊಗಳಿದ್ದಾರೆ.
Advertisement
Advertisement
ಧೋನಿ ಚೆನ್ನೈ ತಂಡದ ಅತಿದೊಡ್ಡ ಶಕ್ತಿ, ಇಡೀ ಫ್ರಾಂಚೈಸಿಯೇ ಅವರ ಮೇಲೆ ಅವಲಂಬಿತವಾಗಿದೆ. ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆತ್ಮವಿದ್ದಂತೆ. ಧೋನಿ ತಂಡದಲ್ಲಿ ಇರುವವರೆಗೂ ಚೆನ್ನೈ ತಂಡ ನಿರಳವಾಗಿ ಉಸಿರಾಡುತ್ತದೆ. ಜೊತೆಗೆ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಾರೆ. ಎಂಎಸ್ ಧೋನಿ ಓರ್ವ ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ತಂಡದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತಾರೆ ಎಂದು ಚೋಪ್ರಾ ಹೇಳಿದ್ದಾರೆ.
Advertisement
Advertisement
ಧೋನಿ ಕಳೆದ ಕೆಲ ದಿನಗಳಿಂದ ಕ್ರಿಕೆಟ್ ಆಡಿಲ್ಲ. ಇದು ಕೆಲವರಿಗೆ ಧೋನಿ ಮುಂಚೆಯಂತೆಯೇ ಮೈದಾನದಲ್ಲಿ ಬ್ಯಾಟ್ ಬೀಸುತ್ತಾರಾ, ಓಡುತ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ನಾವೆಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು ಆತ ಬಹಳ ಅನುಭವವುಳ್ಳ ಆಟಗಾರ, ಅನುಭವವನ್ನು ನಾವು ಸೂಪರ್ ಮಾರ್ಕೆಟಿನಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಈ ಬಾರಿ ಧೋನಿ ಉತ್ತಮವಾಗಿ ಆಡುತ್ತಾರೆ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧೋನಿಯವರು ನಮ್ಮ ತಂಡದ ಜೀವನ ಮತ್ತು ಆತ್ಮ ಎಂದು ಈ ಹಿಂದೆಯೇ ಚೆನ್ನೈ ತಂಡ ಹೇಳಿಕೊಂಡಿದೆ. ಹೀಗಾಗಿ ಧೋನಿ ಈ ಬಾರಿ ಎಲ್ಲರಿಗಿಂತ ಬಹಳ ಚೆನ್ನಾಗಿ ಆಡುತ್ತಾರೆ. ಧೋನಿ ಬ್ಯಾಟ್ಸ್ ಮ್ಯಾನ್ ಆಗಿ ಹೆಚ್ಚು ಪ್ರಭಾವ ಬೀರುತ್ತಾರೆ. ಯಾವಾಗ ಸ್ಪಿನ್ನರ್ ಗಳು ಬೌಲ್ ಮಾಡುತ್ತಾರೋ ಆಗ ಧೋನಿ ಉತ್ತಮವಾಗಿ ಆಡುತ್ತಾರೆ. ನನಗೆ ನಂಬಿಕೆ ಇದೆ ಎಂಎಸ್ ಧೋನಿ ಈ ಬಾರಿಯ ಐಪಿಎಲ್ ಅನ್ನು ಆಳುತ್ತಾರೆ ಎಂದು ಅಂತಾ ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಚೆನ್ನೈ ತಂಡದ ಪ್ರಮುಖ ಇಬ್ಬರು ಆಟಗಾರಾದ ರೈನಾ ಮತ್ತು ಹರ್ಭಜನ್ ವೈಯಕ್ತಿಕ ಕಾರಣದಿಂದ ಐಪಿಎಲ್‍ನಿಂದ ಹೊರೆಗೆ ಬಂದಿದ್ದಾರೆ. ಅದರೂ ಚೆನ್ನೈ ತಂಡ ಬಲಿಷ್ಠವಾಗಿದೆ ಎಂದು ಚೋಪ್ರಾ ಹೇಳಿದ್ದಾರೆ. ಯುಎಇ ಮೈದಾನಗಳು ಸ್ಪಿನ್ನರ್ ಗೆ ಹೆಚ್ಚು ಸಹಾಯಕವಾಗಲಿದ್ದು, ಜಡೇಜಾ, ತಾಹೀರ್, ಚಾವ್ಲಾ ಉತ್ತಮವಾಗಿ ಸ್ಪಿನ್ ಮಾಡಲಿದ್ದಾರೆ ಎಂದು ಚೋಪ್ರಾ ತಿಳಿಸಿದ್ದಾರೆ.