ಬೆಂಗಳೂರು: ರಾಜ್ಯದಲ್ಲಿ ಜನತಾ ಲೌಕ್‍ಡೌನ್ ಮಧ್ಯೆ ಜನ ರಸ್ತೆಗಿಳಿದಿದ್ದಾರೆ. ಸೋಮವಾರದಿಂದ ಜನ ರಸ್ತೆಗಿಳಿದರೆ ಅಂತವರನ್ನು ಆರೆಸ್ಟ್ ಮಾಡಿ ಜೈಲಿಗೆ ಹಾಕುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಲಾಕ್‍ಡೌನ್ ಮಧ್ಯೆ ಜನರ ಓಡಾಟದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಮಲ್ ಪಂತ್ ಅವರು, ಇವತ್ತು ಕೂಡ ಬೇಕಾಬಿಟ್ಟಿಯಾಗಿ ರಸ್ತೆಗಿಳಿಯುತ್ತಿರುವ ವಾಹನಗಳನ್ನು ನಾವು ಸೀಜ್ ಮಾಡುತ್ತಿದ್ದೇವೆ. ಪ್ರತಿ ಜಂಕ್ಷನ್‍ಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದಾರೆ. ಆದರೆ ಸೋಮವಾರದಿಂದ ಈ ರೀತಿ ಜನ ರಸ್ತೆಗಿಳಿದರೆ ಅಂತವರನ್ನು ಬಂಧಿಸುತ್ತೇವೆ. ಪ್ರತಿ ಜಂಕ್ಷನ್‍ಗಳಲ್ಲಿ ಕೆಎಸ್‍ಆರ್‍ಪಿ ಅಥವಾ ಬಿಬಿಎಂಪಿ ವಾಹನವನ್ನು ನಿಲ್ಲಿಸಿ ಬಿಗಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
Advertisement
Advertisement
ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದೇವೆ. ಬೇಕಾಬಿಟ್ಟಿ ರಸ್ತೆಗೆ ಬಂದಂತಹ ಕಾರು, ಬೈಕ್‍ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸೋಮವಾರದಿಂದ ರಸ್ತೆಗಳಲ್ಲಿ ಯಾವ ಕಾರಣಕ್ಕೂ ಜನ ಕಾಣಬಾರದು. ರಸ್ತೆಗಳಲ್ಲಿ ಜನ ಕಂಡುಬಂದರೆ ಅಂತವರ ವಾಹನ ಹಾಗೂ ಅವರನ್ನು ಅರೆಸ್ಟ್ ಮಾಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
Advertisement