ಹುಬ್ಬಳ್ಳಿ: ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ನಿವೇಶನದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಡಬ್ಬಿ ಅಂಗಡಿ ತೆರವು ಕಾರ್ಯಾಚರಣೆಗೆ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಎಸ್.ಡಿ.ಎಂ ಎದುರು ಸತ್ತೂರು ಲೇಔಟ್‍ನಲ್ಲಿದ್ದ ಅನಧಿಕೃತ ಡಬ್ಬಿ ಅಂಗಡಿ ತೆರವುಗೊಳಿಸಲು ಕಾರ್ಯ ಇಂದು ನಡೆದಿದೆ. ಈ ಮೂಲಕ ಹುಡಾ ಅಧ್ಯಕ್ಷರಾದ ನಾಗೇಶ್ ಕಲಬುರ್ಗಿಯವರು ಹುಬ್ಬಳ್ಳಿ-ಧಾರವಾಡದಲ್ಲಿನ ಹುಡಾ ಸಿಎ ಲ್ಯಾಂಡ್ ಸರ್ವೆ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿದ್ದ ನಿವೇಶನದಲ್ಲಿ ಅನಧಿಕೃತ ಕಟ್ಟಡ, ಅಂಗಡಿ, ತೆರವುಗೊಳಿಸಲು ಸೂಚಿಸಿದ ನಾಗೇಶ್ ಕಲಬುರ್ಗಿ, ಇನ್ನೂ ಬಾಕಿ ಇರುವ ಸಿಎ ನಿವೇಶನದಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುವವರು ಶೀಘ್ರವೇ ತೆರವು ಗೊಳಿಸಬೇಕು. ಇಲ್ಲವಾದರೆ ಮುಲಾಜಿಲ್ಲದೆ ಹುಡಾದಿಂದ ಕಾರ್ಯಾಚರಣೆ ನೆಡೆಸಿ ತೆಗೆದು ಹಾಕಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸದಸ್ಯರಾದ ಯಲ್ಲಪ್ಪ ಅರವಳದ. ಸುನೀಲ ಮೊರೆ ಆಯುಕ್ತರಾದ ವಿನಾಯಕ ಪಾಲನಕರ್, ನಗರ ಯೋಜಕ ಸದಸ್ಯ ವಿವೇಕ ಕಾರೇಕರ್, ಕಾರ್ಯ ನಿರ್ವಾಹಕ ಅಭಿಯಂತರಾ ಎಂ ರಾಜಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಉಮೇಶ್ ಬೇವೂರ, ಸಹಾಯಕ ಅಭಿಯಂತರಾದ ಬಸವರಾಜ ದೇವಗಿರಿ, ಎಂ ಎಂ ಶಿಲವಂತರ ಮತ್ತು ಆರ್ ಜಿ ಪಾಟೀಲ್ ಉಪಸ್ಥಿತರಿದ್ದರು.