ಬೆಂಗಳೂರು: ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ. ಅನಗತ್ಯ ಹೇಳಿಕೆ ಪ್ರತಿಹೇಳಿಕೆ ಸರಿಯಲ್ಲ. ಯಾರ ಬಗ್ಗೆಯೂ ಮಾತನಾಡಬಾರದು. ವೈಯಕ್ತಿಕ ವಿಚಾರಗಳನ್ನು ನಾನು ಮಾತನಾಡುವುದಿಲ್ಲ ಎಂದು ಸಿಟಿ ರವಿ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ತಂದು ಕೊಟ್ಟವರ ಬಗ್ಗೆ ಗೌರವವಿಲ್ಲ. ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು. ಅಂಬೇಡ್ಕರ್ ಇಂತಹ ಸಂವಿಧಾನ ಕೊಡದಿದ್ದರೆ ರವಿ ಎಂಎಎಲ್ ಆಗ್ತಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ನಾಳೆ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ದೇಶದಲ್ಲಿ ಆಚರಣೆ ಮಾಡುತ್ತಿದ್ದೇವೆ. ಇದನ್ನು ನಾವು ಅಮೃತ ದಿನಚಾರಣೆ ಅಂತ ಕೂಡ ಕರೆಯುತ್ತೇವೆ. ಬ್ರಿಟಿಷ್ ರಿಂದ ಸ್ವಾತಂತ್ರ್ಯ ಕೊಡಿಸಲು ಅನೇಕರು ಹೋರಾಟ ಮಾಡಿದ್ದಾರೆ. ಬೋಸ್, ಮೌಲಾನಾ ಆಜಾದ್, ಚಂದ್ರಶೇಖರ ಸೇರಿದಂತೆ ಲಕ್ಷಾಂತರ ಜನರು ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಎಲ್ಲಾ ಜನಾಂಗದವರು, ಎಲ್ಲಾ ಧರ್ಮದ ಸೇರಿ ಸ್ವಾತಂತ್ರ್ಯ ಕೊಡಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಯಾರು ಕೂಡ ಯಾವುದೇ ಆಸೆ ಇಟ್ಟುಕೊಂಡಿರಲಿಲ್ಲ. ಯಾವುದೇ ಅಧಿಕಾರ ಆಸೆಗಳನ್ನು ಇಟ್ಕೊಂಡು ಹೋರಾಟ ಮಾಡಿರಲಿಲ್ಲ. ಎಲ್ಲಾ ನಿಸ್ವಾರ್ಥ ಮನೋಭಾವದಿಂದ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಾನು ಕುಡುಕ ಅಲ್ಲ, ಕುಡಿಯುವ ಅಭ್ಯಾಸವೂ ನನಗಿಲ್ಲ: ಸಿ.ಟಿ.ರವಿ
Advertisement
ಕೊರೊನಾ ಮೂರನೇ ಅಲೆ ಬಗ್ಗೆ ರಾಜ್ಯದ ಗಡಿಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಗಡಿ ಜಿಲ್ಲೆಯಲ್ಲಿ ನಿಜಕ್ಕೂ ಆತಂಕ ಇದೆ. ಮೂರನೇ ಅಲೆಯನ್ನು ನಿರ್ಲಕ್ಷಿಸಬಾರದು. ಕೇವಲ ವೀಕೆಂಡ್ ಕಫ್ರ್ಯೂ ಪರಿಹಾರ ಅಲ್ಲ. ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ವಹಿಸಬೇಕು. ಲಸಿಕೆಯ ಅಭಾವ ತುಂಬಾ ಇದೆ. ಎಲ್ಲರಿಗೂ ಕಡ್ಡಾಯ ಲಸಿಕೆ ಕೊಡಿಸಿ. 6 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊಡಲಿ. ಲಸಿಕೆ ಕೊಡದೇ ಸಿಎಂ ಮೀಟಿಂಗ್ ಮಾಡಿದ್ರೆ ಏನು ಪ್ರಯೋಜನ? ಯಡಿಯೂರಪ್ಪ ಸಿಎಂ ಆಗಿದ್ದಾಗ ತುಂಬಾ ಸಭೆ ಮಾಡಿದ್ರು ಏನೂ ಉಪಯೋಗ ಆಗಿಲ್ಲ. ಶಾಲೆ ಆರಂಭಿಸಬೇಡಿ ಅಂತ ನಾನು ಹೇಳಲಾರೆ, ಹಾಗಂತ ಪರಿಸ್ಥಿತಿ ಅವಲೋಕಿಸದೇ ಮಾಡುವುದು ಬೇಡ. ತಜ್ಞರ ಸಲಹೆಯಂತೆ ನಿರ್ಧಾರ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಕೊರೊನಾ ಮೂರನೇ ಅಲೆ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೇರಳ, ಮಹಾರಾಷ್ಟ್ರ ಗಡಿಭಾಗದಲ್ಲಿ ಹೆಚ್ಚಿದೆ. ಸರ್ಕಾರ ಕಟ್ಟೆಚ್ಚರ ಕೈಗೊಳ್ಳಬೇಕು. ಕೇವಲ ಲಾಕ್‍ಡೌನ್, ಕರ್ಫ್ಯೂ ಹಾಕಿದರೆ ಸಾಲದು. ಜನರು ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಮುಖ್ಯವಾಗಿ ಸರ್ಕಾರ ವ್ಯಾಕ್ಸಿನೇಷನ್ ಮಾಡಿಸಬೇಕು ಇದು ಸರ್ಕಾರದ ಕೆಲಸ. ಸಿಎಂ ಬೊಮ್ಮಾಯಿ ಮೀಟಿಂಗ್ ಮಾಡಿದ್ರೆ ಸಾಲದು ಜನರಿಗೆ, ವ್ಯಾಕ್ಸಿನೇಷನ್ ಮಾಡಿಸಬೇಕು. ಶಾಲಾ, ಕಾಲೇಜು ಒಪನ್ ಮಾಡಬಾರದು ಅಂತ ಅಲ್ಲ. ಕೇಸ್ ಗಳನ್ನು ನೋಡ್ಕೊಂಡು ಶಾಲೆಗಳನ್ನು ಒಪನ್ ಮಾಡಬೇಕು. ಜನರು ಹೆಚ್ಚು ಸೇರುವುದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಒಂದು ವರ್ಷ ಜಾತ್ರೆ, ಹಬ್ಬಗಳನ್ನು ಮಾಡಿಲ್ಲ ಅಂದ್ರೆ ಏನ್ ಆಗಲ್ಲ. ಗಣಪತಿ ಮನೆಗಳಲ್ಲಿ ಕುರಿಸಿ ಹಬ್ಬ ಮಾಡಬಹುದು ಎಂದರು.
ಜನಸಂದಣಿ ತಡೆಯುವ ಕೆಲಸ ಸರ್ಕಾರದದಿಂದ ಆಗಲಿ. ಜಾತ್ರೆ ಸೇರಿದಂತೆ ಅನಗತ್ಯ ಉತ್ಸವಗಳನ್ನು ಮುಂದಕ್ಕೆ ಹಾಕಿ. ಗಣೇಶನ ಹಬ್ಬ ಮನೆಯಲ್ಲಿ ಆಚರಿಸಿ. ಸಂಭ್ರಮಾಚರಣೆ ಕೈಬಿಡಿ ಎಂದು ಮನವಿ ಮಾಡಿಕೊಂಡರು. ಗೃಹ ಸಚಿವರೇ ಕಚೇರಿ ಆರಂಭಿಸಿರುವ ರೀತಿ ಸರಿಯಲ್ಲ. ಕೋವಿಡ್ ನಿಯಮಾವಳಿಯನ್ನು ಪಾಲಿಸಿಲ್ಲ. ಸಚಿವರ ಅದ್ದೂರಿ ಧೋರಣೆ ಸರಿಯಲ್ಲ. ಈ ಸರ್ಕಾರ ಟೇಕ್ ಆಫ್ ಆಗಲ್ಲ ಈ ಸರ್ಕಾರ ಉಳಿದ ಅವಧಿ ಪೂರ್ಣ ಮಾಡಲ್ಲ ಅನಿಸುತ್ತಿದ್ದೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಅವಾಚ್ಯ ಪದ ಬಳಕೆ ಮಾಡಿದ್ದು ಎಲ್ಲ ಕಾಂಗ್ರೆಸ್ ನಾಯಕರ ವಿರುದ್ಧವಲ್ಲ: ಈಶ್ವರಪ್ಪ
ಜಾತಿ ಗಣತಿ ಹೋರಾಟ ವಿಚಾರವಾಗಿ ಮಾತನಾಡಿ, ಯಾರೇ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದರೂ ನಾನು ಅವರ ಪರ. ನನ್ನ ಕಾಲದಲ್ಲಿ ವರದಿ ತಯಾರಾಗಿತ್ತಾ? ಕಾಂತಾರಾಜು ಕೊಡ್ತಿನಿ ಅಂತಾ ಹೇಳಿದ್ನಾ? ಆಗ ನಾನು ತೆಗೆದುಕೊಳ್ಳದೇ ಇದ್ನಾ? ಕುಮಾರಸ್ವಾಮಿ ಕಾಲದಲ್ಲಿ ವರದಿ ರೆಡಿ ಆಗಿತ್ತು. ಆಗ ಹಿಂದುಳಿದ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ವರದಿ ಸ್ವಿಕರಿಸಲು ಸಿದ್ದರಾಗಿದ್ದರು. ಆದರೆ ಸಿಎಂ ಆಗಿದ್ದ ಕುಮಾರಸ್ವಾಮಿ ಸ್ವೀಕರಿಸಲಿಲ್ಲ. ಜಾತಿಗಣತಿ ವರದಿ ಸ್ವೀಕರಿಸದೇ ಇದ್ರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ರಾಜೀನಾಮೆ ಕೊಡೋದೇ ಪರಿಹಾರ ಆಗಿದ್ದರೆ ಕೊಡ್ತಾ ಇದ್ದೆ. ಆಯ್ತು ನಾನು ತೆಗೆದುಕೊಂಡಿಲ್ಲ ಇವರು ಏಕೆ ಮಾಡಿಲ್ಲ? ಹಿಂದುಳಿದ ವೇದಿಕೆ ಅಷ್ಟೇ ಅಲ್ಲ ಹಿಂದುಳಿದವರ ಒಕ್ಕೂಟ ಕೂಡ ಇದೆ. ಯಾರೋ ಹೋರಾಟ ಮಾಡಿದ್ರೂ ನನ್ನ ಬೆಂಬಲ ಇದೆ. ಅವರು ಹೋರಾಟ ಮಾಡಲಿ. ಆ ಬಳಿಕ ನಾನು ಮಾತನಾಡುತ್ತೇನೆ. ಈಶ್ವರಪ್ಪ ಸುಮ್ನೇ ಮಾತನಾಡಬಾರದು. ಈಶ್ವರಪ್ಪ ಬ್ರಿಗೇಡ್ ಎಲ್ಲಾ ಇತ್ತಲ್ಲ ಮಾಡಲಿ ಈಗ ಹೋರಾಟ ಎಂದು ಟಾಂಗ್ ನೀಡಿದರು.