ಮಡಿಕೇರಿ: ಕುಶಾಲನಗರ ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರ ಬಂದು ಓಡಾಡುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸಿ ನಂತರ ಲಾಠಿ ಏಟು ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಕೋವಿಡ್ ನಿಯಂತ್ರಣ ಮಾಡಲು ಜಿಲ್ಲೆಯಲ್ಲಿ ಟಫ್ ರೂಲ್ಸ್ ಮಾಡಿದೆ. ಸೋಮವಾರ ಮತ್ತು ಶುಕ್ರವಾರ ಮಾತ್ರ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.
ಕೆಲ ಯುವಕರು ಅನಗತ್ಯವಾಗಿ ರಸ್ತೆಗೆ ಇಳಿದು ಬೈಕ್ ನಲ್ಲಿ ಓಡಾಟ ನಡೆಸುವ ಸವಾರರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ. ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ ಕುಶಾಲನಗರ ಪೊಲೀಸರು ಕಿವಿ ಹಿಡಿದು ಬಸ್ಕಿ ಹೊಡೆಸಿದ್ದಾರೆ. ಲಾಠಿ ಪೆಟ್ಟು ಬೀಳುತ್ತಿದ್ದಂತೆ ಎದ್ನೋ ಬಿದ್ನೋ ಅಂಯ ಯುವಕರು ಓಡಿ ಹೋಗಿದ್ದಾರೆ.