ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗ್ಡೆ ಅನಾರೋಗ್ಯಕ್ಕೆ ಒಳಗಾಗಿರುವುದಕ್ಕೆ ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಟೀಕೆ ಮಾಡಿದ್ದಾರೆ.
ಕಾರವಾರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅಸ್ನೋಟಿಕರ್, ಅನಂತ್ ಕುಮಾರ್ ಹೆಗ್ಡೆ ಅನಾರೋಗ್ಯದಿಂದ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟವಿದೆ. ಬಿಜೆಪಿಗೆ ಸೇರಿ ಮುಂದೆ ಎಂಪಿ ಸೀಟಿಗೆ ನಿಲ್ಲಿ ಎಂದು ನನ್ನ ಸ್ನೇಹಿತರು ಹೇಳಿದ್ದರು. ಮೊನ್ನೆ ಜಾತ್ರೆಯಲ್ಲಿ ನೋಡಿದಾಗ ಗಟ್ಟಿಯಾಗಿದ್ದಾನೆ, ಹಾಗಾಗಿ ಬಿಜೆಪಿಗೆ ಸೇರಿ ಎಂ.ಪಿ ಸೀಟಿಗೆ ನಿಲ್ಲುವುದು ಕಷ್ಟ ಎಂದು ಹೇಳಿದರು.
Advertisement
Advertisement
ಅನಂತ್ ಕುಮಾರ್ ಹೆಗ್ಡೆ ಮಲಗಿಬಿಟ್ಟ ಅಂತ ಅಂದುಕೊಂಡಿದ್ದೆವು, ಹೇಗೂ ಐದು ವರ್ಷ ಆತ ಯಾರಿಗೂ ಮುಖ ಕಾಣಿಸುವುದಿಲ್ಲ. ಹಾಗಾಗಿ ಆತನಿಗೆ ಹಂಡ್ರೆಡ್ ಪರ್ಸೆಂಟ್ ಏನೋ ಆಗಿರಬೇಕು. ಬೋನ್ ಕ್ಯಾನ್ಸರ್ ಆಗಿದೆ. ಅದಾಗಿದೆ, ಇದಾಗಿದೆ ಅಂತ ಎಲ್ಲಾ ರೀತಿಯ ಸುದ್ದಿ ಬರುತ್ತಿದೆ. ಆದ್ರೆ ನನಗೆ ಮನಸ್ಸಿಗೆ ನೋವಾಗಿಲ್ಲ. ಹೀಗೂ ಕಾಣುವುದಿಲ್ಲ, ಹೇಗೂ ಕಾಣುವುದಿಲ್ಲ. ಎಲ್ಲಾದರೂ ಹಿಂದೂ-ಮುಸ್ಲಿಂ ಗಲಾಟೆಯಾಗಬೇಕು. ಯಾರಾದ್ರೂ ಹಿಂದೂಗಳು ಸಾಯಬೇಕು. ಅಂತ ಸಂದರ್ಭದಲ್ಲಿ ಮಾತ್ರ ಅವರನ್ನು ಕಾಣಬಹುದು ಎಂದರು.
Advertisement
Advertisement
ಅವರು ಚುನಾವಣೆ ಸ್ಪರ್ಧಿಸಿದ ಸಂದರ್ಭದಲ್ಲಿ ಯಾವುದಾದರೂ ಅನುಕಂಪ ಬರುತ್ತದೆ. ಯಾವಾಗಲೂ ಅವರ ಪರ ಒಳ್ಳೆ ಸನ್ನಿವೇಶ ಕ್ರಿಯೇಟ್ ಆಗುತ್ತೆ, ಗೆಲ್ಲುತ್ತಾರೆ. ಜಿಲ್ಲೆಯಲ್ಲಿ ಹಿಂದುತ್ವ ಶಕ್ತಿ ದೊಡ್ಡದಿದೆ ಅದನ್ನು ನಾನು ಒಪ್ಪಿದ್ದೇನೆ. ಇವತ್ತು ಕಮ್ಯುನಲ್ ನಲ್ಲೇ ನಮ್ಮ ರಾಜಕಾರಣ ನೆಡೆಯುವುದು. ಬಾಕಿ ವಿಚಾರದ ಮಾತೇ ಇಲ್ಲ. ಅನಂತ್ ಕುಮಾರ್ ಇದ್ರೇನು, ಹೋದ್ರೇನು ನಮಗೇನೂ ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಯಸಿದ್ದ ಅನಂತ ಕುಮಾರ್ ಹೆಗಡೆ- ಸದ್ಯ ಕ್ಷೇತ್ರದ ಜನರಿಗೆ ಅಲಭ್ಯ
ನನ್ನ ರಾಜಕೀಯ ಜೀವನ ನಿರ್ಧಾರ ಮಾಡೋದು ದೇವೇಗೌಡರ ಕುಟುಂಬ: ಮಧುಬಂಗಾರಪ್ಪನವರು ನನ್ನ ಅಣ್ಣ. ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ. ಆದರೆ ನಾನು ಹೋಗಿವುದಿಲ್ಲ. ನನ್ನ ರಾಜಕೀಯ ಜೀವನವನ್ನು ದೇವೇಗೌಡರ ಕುಟುಂಬ ನಿರ್ಧಾರ ಮಾಡುತ್ತೆ. ಅವರು ಹೇಗೆ ಏನು ಮಾಡಬೇಕು ಎಂದು ಹೇಳುತ್ತಾರೋ ಹಾಗೆ ಮಾಡುತ್ತೇನೆ ಎಂದು ಅಸ್ನೋಟಿಕರ್ ಹೇಳಿದರು.