ಕೊಪ್ಪಳ: ಮದ್ಯ ಬೆಲೆ ದುಪ್ಪಟ್ಟಾಗಿದೆ ಒಂದು ಕಡೆ ಕುಳಿತು ಚರ್ಚಿಸೋಣ ಬನ್ನಿ ಎಂದು ಮದ್ಯಪ್ರಿಯರು ಊರಿನಲ್ಲಿ ಡಂಗುರ ಸಾರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.
Advertisement
ಲಾಕ್‍ಡೌನ್ ನೆಪವಾಗಿಟ್ಟುಕೊಂಡು ಅಧಿಕ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪುಷ್ಠಿ ಕೊಡುವಂತೆ ಕೊಪ್ಪಳ ಜಿಲ್ಲೆಯ ಹೊಸಹಳ್ಳಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಮದ್ಯಪ್ರೀಯರು ಗ್ರಾಮದಲ್ಲಿರುವ ಎಲ್ಲಾ ಕುಡುಕರು ಒಂದು ಕಡೆ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ್ದಾರೆ.
Advertisement
Advertisement
ನಮ್ಮ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಲಾಕ್‍ಡೌನ್ ನೆಪ ಹೇಳಿಕೊಂಡು 50 ರೂಪಾಯಿಗೆ ಮಾರಾಟ ಮಾರಾಟವಾಗುವ ಮದ್ಯವನ್ನು 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಬೆಲೆ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಗ್ರಾಮದಲ್ಲಿ ಒಂದು ಕಡೆ ಎಲ್ಲರೂ ಸೇರಿ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ
Advertisement
ಈ ಡಂಗುರದ ಪ್ರಕಾರ ಇಂದೇ ಗ್ರಾಮದಲ್ಲಿ ಸಭೆ ನಡೆಸಬೇಕು, ಆದರೆ ಡಂಗುರ ಬಾರಿಸಿದವರಿಗೆ ಎಷ್ಟು ಜನರು ಬೆಂಬಲ ವ್ಯಕ್ತಪಡಿಸುತ್ತಾರೆ. ಮದ್ಯ ಮಾರಾಟ ಮಾಡುವವರು ಬಲಿಷ್ಠರಾಗಿದ್ದು, ಅವರ ವಿರುದ್ಧ ಎಷ್ಟು ಜನ ಬಂಡಾಯ ಎಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.